ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಕಷ್ಟ ನಿವಾರಣೆಗೆ ಶಿಕ್ಷಣವೇ ಮದ್ದು

Rashmi Kasaragodu
Updated On : 6 Apr 2014, 1:23 am

ಕುಣಿಗಲ್: ಮನುಷ್ಯನ ಯಾವುದೇ ರೀತಿಯ ಸಂಕಷ್ಟಗಳಿಗೆ ಸಮರ್ಪಕ ಪರಿಹಾರ ನೀಡಬಲ್ಲ ಏಕೈಕ ಸಾಧನ ಎಂದರೆ ಶಿಕ್ಷಣ, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಯಾವುದೇ ಜಾತಿ, ವರ್ಗ, ಮತ, ಪಂಥಗಳ ಪಂಗಡದವರಿರಲಿ ತಮ್ಮ ಮಕ್ಕಳಿಗೆ ಈ ದೇಶದ ಸಂಸ್ಕಾರ ಮತ್ತು ಸಂಸ್ಕೃತಿ ಹಿನ್ನೆಲೆಯುಳ್ಳ ಶಿಕ್ಷಣ ಕೊಡಿಸುವುದು ಆದ್ಯ ಕರ್ತವ್ಯವಾಗಬೇಕಿದೆ ಎಂದು
ತುಮಕೂರು ರಾಮಕೃಷ್ಣ ವಿವೇಕಾನಂದ ಮಠದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೊತ್ತಗೆರೆ ಹೋಬಳಿಯ ಕಲ್ಲುಪಾಳ್ಯ ಸರ್ಕಾರಿ ಪ್ರಾಥಮಿಕ ಸಾಲೆಯಲ್ಲಿ ಹಮ್ಮಿಕೊಳ್ಳಳಾದ ಸಮುದಾಯದತ್ತ ಶಾಲೆ ಮತ್ತು ಆಶ್ರಮದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಆದ್ಯಶಕ್ತಿ ಮಕ್ಕಳ ಬಳಗದ ಮೂರನೇ ವರ್ಷದ ಸಂಸ್ಕೃತ ಸೌರಭ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿದರು.
ಶಿಕ್ಷಣವಂತ ರಾಷ್ಟ್ರವೇ ಸಮೃದ್ಧ: ಯಾವ ರಾಷ್ಟ್ರದಲ್ಲಿ ವಿದ್ಯಾಭ್ಯಾಸ ಸಮರ್ಪಕವಾಗಿದೆಯೇ ಆ ರಾಷ್ಟ್ರವೂ ಸಮೃದ್ಧವಾಗಿದೆ. ಶಿಕ್ಷಣ ಎಂದರೆ ಕೇವಲ ಒದುಬರಹ ಕಲಿಸುವುದಷ್ಟೆ ಅಲ್ಲ, ಮಕ್ಕಳಿಗೆ ನಿಜ ಅರ್ಥದಲ್ಲಿ ಉತ್ತಮ ಸಂಸ್ಕಾರ, ಗುರುಹಿರಿಯರನ್ನು ಗೌರವಿಸಿ ನಮ್ಮನೆಲದ ಗರಿಮೆ, ಸಂಸ್ಕೃತಿಗಳನ್ನು ಗೌರವಿಸಿ ಆಧರಿಸುವಂತ ಉತ್ತಮ ಧ್ಯೇಯೋದ್ದೇಶಗಳಿಂದದ ಕೂಡಿದಂತ ವಿದ್ಯೆ ನೀಡಬೇಕಿದೆ.
ಮಾರ್ಗದರ್ಶನ ಕೊರತೆ: ಸರ್ಕಾರಿ ಶಾಲೆಗಳಿಗೆ ಸಮರ್ಪಕ ಮಾರ್ಗದರ್ಶನ ಕೊರತೆ ಇದೆಯೇ ಹೊರತು ಉತ್ತಮ, ಸಮರ್ಥ ಶಿಕ್ಷಕರ ಕೊರತೆ ಇಲ್ಲ. ಅವಿದ್ಯಾವಂತರಿದ್ದರೆ ಸಮಾಜಕ್ಕೆ ಹಾನಿ ಇಲ್ಲ. ಆದರೆ, ಸಂಸ್ಕಾರ, ಸಂಸ್ಕೃತಿ ಹೀನ ಅವಿದ್ಯಾವಂತರಿದ್ದರೆ, ಇಡೀ ಸಮಾಜಕ್ಕೆ ಮಾರಕವಾಗುತ್ತಾರೆ. ದುರಂತ ಎಂದರೆ ಪಟ್ಟಣ ಪ್ರದೇಶದಲ್ಲಿ ಅಕ್ಷರವಂತರು ತಾವು ವಿದ್ಯಾವಂತರೆಂದು ದುಶ್ಚಟಗಳಿಗೆ ಬಿದ್ದು ತೊಳಲಾಡುತ್ತಿದ್ದಾರೆ. ವಿದ್ಯಾವಂತರಾದ ಅವರು ತಮ್ಮ ದುಶ್ಚಟಗಳನ್ನು ದುಶ್ಚಟ ಎಂದು ಅರಿವು ಇಲ್ಲದಂತ ಅಕ್ಷರವಂತರಾ ಗಿದ್ದಾರೆ ಹೊರತು ಅಕ್ಷರಶ- ವಿದ್ಯಾವಂತರಲ್ಲ, ಇಂತಹ ಸಂಸ್ಕೃತಿಹೀನ ವಿದ್ಯಾರ್ಜನೆ ನೀಡುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಶಿಕ್ಷಣ ಸಂಸ್ಥೆಗಳು ಯುವಜನರನ್ನು ಕೇವಲ ಅಕ್ಷರವಂತರನ್ನಾಗಿ ಮಾಡಿದರೆ ಸಾಲದು, ಅವರನ್ನು ಸಂಭಾವಿತರನ್ನಾಗಿ ಸುವ ಸತ್ವಪೂರ್ಣ, ಮೌಲ್ಯಾಧರಿತ, ಸಂಸ್ಕಾರಯುತ ಶಿಕ್ಷಣ ನೀಡಬೇಕಿದೆ ಎಂದು ಕಿವಿಮಾತು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಈಶ್ವರಯ್ಯ ಮಾತನಾಡಿ, ಸರ್ಕಾರಿ ಶಾಲೆಗಳು ಸಮುದಾಯದ ಆಸ್ತಿಯಾಗಿದೆ. ಸಮುದಾಯವು ಶಾಲೆಗ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುವ ಮೂಲಕ ಶಾಲೆಗಳ ಏಳಿಗೆಗೆ ಶ್ರಮಿಸಬೇಕಿದೆ. ಶಾಲೆಗಳು ಸರ್ವಜನಾಂಗದ ಕಲಿಕೆಯ ತೋಟಗಳಾಗಿವೆ. ಯಾವುದೇ ಬೇಧ-ಭಾವವಿಲ್ಲದೆ ಎಲ್ಲಾ ವರ್ಗದವರಿಗೂ ಗುಣಾತ್ಮಕ ಶಿಕ್ಷಣ ನೀಡುವ ತಾಣಗಳಾಗಿವೆ ಎಂದರು.
ಮತದಾನ ಜಾಗೃತಿ ಅಧಿಕಾರಿಯಾಗಿರುವ ಕಾರಣ,ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲಾ ನಾಗರೀಕರಿಗೂ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳುವ ಬಗ್ಗೆ ಪ್ರತಿಜ್ಞಾ ವಿಧಿ ಬೋದಿಸಿದರು.
ಚಿಕ್ಕಣಸ್ವಾಮಿ ದೇನವಾಲಯದ ಪ್ರಧಾನ ಅರ್ಚಕ ಪಾಪಣ್ಣ, ರಾಮಕೃಷ್ಣ ಆಶ್ರಮದ ಧೀರಾನಂದಸ್ವಾಮಿ, ಪೂರ್ಣಾನಂದ ಸ್ವಾಮಿ, ಶಿಕ್ಷಣಾಧಿಕಾರಿ ವಿ.ಜಿ. ಲೋಕೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಯ್ಯ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್, ಕಸಾಪ ಅಧ್ಯಕ್ಷ ದಿನೇಶ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಪಿ.ಶಶಿರೇಖಾ, ಪ್ರಮುಖರಾದ ಜನಾರ್ದನ್, ಮನೋಹರ್, ವೈ.ಜಿ.ವೆಂಕಟೇಶಯ್ಯ, ಗೋಪಾಲಕೃಷ್ಣ, ಚೌಡಪ್ಪ, ಮುಖ್ಯ ಶಿಕ್ಷಕ ವೀರಣ್ಣ ಇತರರು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಭಗವ್ದಗೀತೆ ಸೇರಿದಂತೆ ಸಂಸ್ಕೃತ ಶ್ಲೋಕಗಳ ಪಠಣ ಮಾಡುವ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಎಲ್ಲಾ ಮಕ್ಕಳಿಗೂ ಭಗವದ್ಗೀತಾ ಗ್ರಂಥಗಳನ್ನು ಬಹುಮಾನವಾಗಿ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement