ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಸುಳ್ಳುಗಾರ ರಾಜಕಾರಣಿಗೆ ಮತದಾರನಿಂದ ತಕ್ಕಪಾಠ'

Rashmi Kasaragodu
Updated On : 6 Apr 2014, 1:20 am

ಕೊರಟಗೆರೆ: ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ನೀರಾವರಿ ಸೌಲಭ್ಯ ನೀಡುವಲ್ಲಿ ವಿಫಲವಾಗಿರುವ ಆಳ್ವಿಕೆ ನಡೆಸಿದ ಸುಳ್ಳು ಭರವಸೆ ನೀಡಿದ ಜನಪ್ರತಿನಿಧಿಗಳು ಈ ಬಾರಿ ಸೋಲು ಅನುಭವಿಸಲಿದ್ದಾರೆ ಎಂದು ತುಮಕೂರು ಲೋಕಸಭಾ ಬಹುಜನ ಸಮಾಜವಾದಿ ಪಾರ್ಟಿ ಅಭ್ಯರ್ಥಿ ನೀಲುಫರ್ ಜಮಾನಿ ಅಹಮದ್ ತಿಳಿಸಿದರು. ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿ, ಕೋಳಾಲ ಹೋಬಳಿ ಹಾಗೂ ಕೊರಟಗೆರೆ ಕಸಬಾ ಹೋಬಳಿಗಳ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದರು. ತುಮಕೂರು ಜಿಲ್ಲೆ ಕೃಷಿ ಆಧಾರಿತ ಪ್ರದೇಶವಾಗಿದ್ದು, ರೈತರು ತಮ್ಮ ಭೂಮಿಯಲ್ಲಿ ಬೆಳೆ ಬೆಳೆಯಲು ನೀರು ಇಲ್ಲದೆ ಉಳುಮೆ ಮಾಡಲು ಸಾಧ್ಯವಾಗದೆ ಕುಳಿತಿರುವ ಸಂದರ್ಭದಲ್ಲಿ ಇಲ್ಲಿನ ಜನ ಪ್ರತಿನಿಧಿಗಳು ಚುನಾವಣಾ ಸಮಯದಲ್ಲಿ ಕೇವಲ ಯೋಜನೆಗಳ ಆಶ್ವಾಸನೆ ನೀಡಿ, ಮತ್ತೆ ಚುನಾವಣೆಗೆ ಕಾಣಿಸಿಕೊಳ್ಳುತ್ತಿದ್ದು ಇಂತ ರಾಜಕಾರಣಿಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿದ್ದು ಚುನಾವಣೆಯಲ್ಲಿ ಸರಿಯಾದ ಬುದ್ಧಿ ಕಲಿಸಲ್ಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement