ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಂಗ್ರೆಸ್ ದೇಶಕ್ಕಾಗಿ ತ್ಯಾಗ ಮಾಡಿದೆ: ಟಿ.ಬಿ. ಜಯಚಂದ್ರ

Rashmi Kasaragodu
Updated On : 7 Apr 2014, 1:08 am

ತಿಪಟೂರು:  ಕಾರ್ಪೋರೇಟ್ ಕಿಂಗ್‌ಗಳು ಮೋದಿಯವರನ್ನು ಪ್ರಧಾನಿ ಮಾಡಿ ತಮ್ಮ ಬೇಳೆಬೇಯಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ದೇಶದ ಜನತೆ ಬಹಳ ಎಚ್ಚರಿಕೆಯಿಂದ ಗಮನಿಸಬೇಕಲ್ಲದೆ ದೇಶಕ್ಕಾಗಿ ಸಾಕಷ್ಟು ಹೋರಾಟ ಮಾಡಿ ಬಡವರ, ಮಧ್ಯಮವರ್ಗದವರ ಕಷ್ಟಸುಖಗಳಿಗೆ ನಿರಂತವಾಗಿ ಶ್ರಮಿಸುವುದರ ಜೊತೆಗೆ ವಿಶ್ವದಲ್ಲಿ ಭಾರತ ಬಲಿಷ್ಠ ಎಂಬುದನ್ನು ತೋರಿಸಿಕೊಟ್ಟಿರುವ ಕಾಂಗ್ರೆಸ್‌ಗೆ ಮಾತ್ರ ಮತ ನೀಡಬೇಕೆಂದು   ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮನವಿ ಮಾಡಿದರು.
 ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಗುಜರಾತಿನಲ್ಲಿ ಮೋದಿ ಮಾಡಿರುವ ಕೆಲಸವೆಂದರೆ ರೈತರ ಕೃಷಿ ಜಮೀನುಗಳನ್ನು ಕಿತ್ತುಕೊಂಡು ಕೈಗಾರಿಕೆ, ಬೃಹತ್ ಕಟ್ಟಡಗಳನ್ನು ಕಟ್ಟಿ ಸಾಮಾನ್ಯ ಜನತೆಯನ್ನು ಸಂಕಷ್ಟಕ್ಕೆ ದೂಡಿರುವುದೇ ದೊಡ್ಡ ಸಾಧನೆ. ಬಿಜೆಪಿ ಮೋದಿ ಎಂಬ ಬೇಜವಾಬ್ದಾರಿ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಮಾತ್ರ ಮಾತ ಯಾಚಿಸುತ್ತಿದೆ ಹೊರತು ಪಕ್ಷ ದೇಶಕ್ಕಾಗಿ ಯಾವ, ತ್ಯಾಗ, ಹೋರಾಟ ಮಾಡಿದೆ ಎಂಬುದನ್ನು ಜನತೆಗೆ ಮನವರಿಕೆ ಮಾಡಿ ಮತ ಕೇಳಲಿ ನೋಡೋಣ ಎಂದರು.  ಸಭೆಯಲ್ಲಿ ಮುಖಂಡರಾದ ಪರಮಶಿವಯ್ಯ, ಶಿವಪ್ರಸಾದ್, ಶಶಿಧರ್, ರಾಜಶೇಖರ್, ಅಬ್ದುಲ್ ಖಾದರ್, ಕೆ.ಎಸ್. ಸದಾಶಿವಯ್ಯ, ಮೋಹನ್ಸ್ಥ್‌ಳೀಯ ಸಂಸ್ತೆಗಳ ಚುನಾಯಿತ ಪ್ರತಿನಿಧಿಗಳು, ಸಾಕಷ್ಟು ಮುಖಂಡರುಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement