ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆ.ಸಿ. ಮಾಧುಸ್ವಾಮಿಗೆ ಬಿಜೆಪಿ ಆಹ್ವಾನ

Rashmi Kasaragodu
Updated On : 7 Apr 2014, 1:05 am

ಚಿಕ್ಕನಾಯಕನಹಳ್ಳಿ: ಇದುವರೆಗೂ ಜನತಾ ಪರಿವಾರದ ಪಕ್ಷಗಳಲ್ಲೇ ಗುರುತಿಸಿಕೊಂಡು ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಜೆ.ಸಿ. ಮಾಧುಸ್ವಾಮಿಯವರು ತಮ್ಮ ಬೆಂಬಲಿಗರ ಸಭೆ ಕರೆದು ಬಿಜೆಪಿ ಸೇರುವ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳು ಅವರ ಮನೆಗೆ ತೆರಳಿ ಆಹ್ವಾನ ನೀಡಿದರು. ಏ.5ರಂದು ಪಟ್ಟಣದ ನವೋದಯ ಪದವಿ ಕಾಲೇಜು ಆವರಣದಲ್ಲಿ ಸಭೆ ಸೇರಿ ಬೆಂಬಲಿಗರು ಕೈಗೊಂಡ ತೀರ್ಮಾನದಂತೆ ಬಿಜೆಪಿ ಸೇರುವುದಾಗಿ ಘೋಷಿಸಿದ್ದರು. 6 ರಂದು ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ. ಜಗದೀಶ್, ತಾಪ ಅಧ್ಯಕ್ಷ ನವೀನ್ ಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ವಸಂತ್, ಮಾಜಿ ಅಧ್ಯಕ್ಷ ಸೀತಾರಾಮು ಮುಂತಾದವವರು ಜೆ.ಸಿ.ಮಾಧುಸ್ವಾಮಿಯವರ ಮನೆಗೆ ತೆರಳಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement