ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮತ್ತೆ ಗದ್ದುಗೆ ಏರಲಿದೆ ಯುಪಿಎ ಸರ್ಕಾರ

Rashmi Kasaragodu
Updated On : 7 Apr 2014, 1:07 am

ಮಧುಗಿರಿ: ಕೇಂದ್ರದ ಯುಪಿಎ ಸರ್ಕಾರ  ಜನಪರವಾಗಿ ಸಮರ್ಥ ಆಡಳಿತ ನೀಡುವ ಮೂಲಕ ದೇಶದ ಬಡ ಜನತೆ ಮೇಲೆತ್ತುವ ಕೆಲಸ ಮಾಡಿರುವ  ಪರಿಣಾಮ ಮತ್ತೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಗದ್ದುಗೆಗೆ ಏರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಭಾನುವಾರ ಕೊರಟಗೆರೆ ಕ್ಷೇತ್ರದ ವಿವಿಧ ಹೋಬಳಿಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಧುಗಿರಿ ತಾಲೂಕಿನ ಪುರವರ ಹೋಬಳಿ ಹನುಮಂತಪುರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.  ಕೇಂದ್ರದ ಯುಪಿಎ ಸರ್ಕಾರ 10 ವರ್ಷ ಸಮರ್ಥವಾಗಿ ಆಡಳಿತ ನೀಡಿರುವ ನಿಟ್ಟಿನಲ್ಲಿ ಜನರ ವಿಶ್ವಾಸ ಗಳಿಸಿದೆ. ಮುಂದಿನ ದಿನಗಳಲ್ಲೂ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಕಾರ್ಯ ಕೈಗೊಳ್ಳಲು   ಕಾಂಗ್ರೆಸ್ ಬದ್ಧವಾಗಿದೆ. ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಶಿಕ್ಷಣ, ಮಾಹಿತಿ, ಆಹಾರ, ಉದ್ಯೋಗದ ಹಕ್ಕು ನೀಡಿದ್ದು, ಆರೋಗ್ಯ ಮತ್ತು ವಸತಿ ಕಲ್ಪಿಸಲು ಈ ಚುನಾವಣೆಯಲ್ಲಿ ರಾಜ್ಯದ ಮತದಾರರು  ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಕ್ತಿ ಕೊಡಬೇಕು ಎಂದು ಮನವಿ ಮಾಡಿದರು.
20 ಕ್ಕೂ ಹೆಚ್ಚು ಸ್ಥಾನ: ರಾಜ್ಯದಲ್ಲಿ 20ಕ್ಕೂ ಅಧಿಕ ಕಾಂಗ್ರೆಸ್ ಸಂಸದರು ಈ ಚುನಾವಣೆಯಲ್ಲಿ ಆಯ್ಕೆಯಾಗಲಿದ್ದು, ಅದೇ ರೀತಿ  ತುಮಕೂರು ಲೋಕಸಭಾ ಕ್ಷೇತ್ರ ಕೂಡ  ನಮಗೆ ಪ್ರತಿಷ್ಠೆಯಾಗಿದೆ. ನಮ್ಮ  ಅಭ್ಯರ್ಥಿ ಮುದ್ದಹನುಮೇಗೌಡ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪರಮೇಶ್ವರ್, ಕೇಂದ್ರ ಸರ್ಕಾರ ಕೈಗೊಂಡ ಪ್ರಗತಿಪರ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಸಾಮಾಜಿಕ ನ್ಯಾಯದ ಯೋಜನೆಗಳು ಶ್ರೀಸಾಮಾನ್ಯರನ್ನು ತಲುಪಿದ್ದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು. ಸಂವಿಧಾನದ ಆಶಯಗಳು ಜನತೆಗೆ ಮುಟ್ಟಬೇಕು ಎಂದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.
ಶೆಟ್ಟರ್ ವಿಷಾದಿಸಲಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿಗಳನ್ನು ನಕ್ಸಲರಿಗೆ ಹೋಲಿಸಿರುವುದು ಸಮಂಜಸವಲ್ಲ, ಅವರ ಹೇಳಿಕೆಯ ಮಾತುಗಳನ್ನು ವಾಪಸ್ ಪಡೆದು ವಿಷಾದಿಸಿ ಅವರ ಸ್ಥಾನಕ್ಕೆ ಚ್ಯುತಿ ಬರದ ರೀತಿ ನಡೆದು ಕೊಳ್ಳಬೇಕು ಎಂದರು. ಮಾಜಿ ಸಚಿವ ಸಿ.ವೀರಣ್ಣ, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ  ಕಾರ್ಯದರ್ಶಿ ಸುವರ್ಣಮ್ಮ, ಜಿ.ಪಂ.ಸದಸ್ಯ ಟಿ.ಡಿ.ಪ್ರಸನ್ನಕುಮಾರ್, ನಾರಾಯಣಮೂರ್ತಿ, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಗಾಯಿತ್ರಿ ಬಲರಾಂ,ನೇರಳೇಕೆರೆ ಗ್ರಾ.ಪಂ.ಅಧ್ಯಕ್ಷ ದಿನೇಶ್, ಮುಖಂಡ ಕುಪೇಂದ್ರಪ್ಪ, ಸಂಕಾಪುರ ಜಯರಾಮ್ ಕುಮಾರ್ ರಾಜು ಅನ್ಕೆರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement