ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೋದಿ ಪ್ರಧಾನಿಯನ್ನಾಗಿಸುವುದು ಪ್ರತಿಯೊಬ್ಬರ ಕರ್ತವ್ಯ: ಪ್ರಮೀಳಾ

Rashmi Kasaragodu
Updated On : 7 Apr 2014, 1:06 am

ತುರುವೇಕೆರೆ: ಮಹಾತ್ಮ ಗಾಂಧಿ ಹುಟ್ಟಿದ ನಾಡಿನಲ್ಲಿ ಹುಟ್ಟಿರುವ ಗುಜರಾತ್‌ನ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರದ್ದು ದೂರದೃಷ್ಟಿತ್ವ ಉಳ್ಳ ವ್ಯಕ್ತಿತ್ವ. ದೇಶದಲ್ಲಿ ಶಾಂತಿ ನೆಮ್ಮದಿಯ ಸಹಬಾಳ್ವೆಯನ್ನು ಕಾಣುವ ಮಹತ್ವಾಂಕ್ಷೆಯನ್ನು ಹೊಂದಿರುವವವರು. ಇಂತಹ ಮನೋಭಾವವನ್ನು ಹೊಂದಿರುವ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಬಿಜೆಪಿಯ ಮಹಿಳಾ ಮುಖಂಡರಾದ ಪ್ರಮೀಳಾ ನೇಸರ್ಗಿ ಹೇಳಿದರು.
ಪಟ್ಟಣದಲ್ಲಿ ನಡೆದ ಬಿಜೆಪಿ  ಮಹಿಳಾ ಕಾರ್ಯಕರ್ತರ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಗುಜರಾತ್ ನಲ್ಲಿ ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ಇದೆ. ಆಸ್ತಿ ಖರೀದಿಯಲ್ಲಿ ಮಹಿಳೆಯರಿಗೆ ಆದ್ಯತೆ, ಶುದ್ಧ ನೀರು, ದಿನದ 24 ಗಂಟೆಯೂ ವಿದ್ಯುತ್, ಸಮುದ್ರದ ಪಾಲಾಗುತ್ತಿದ್ದ ನದಿ ನೀರನ್ನು ಜೋಡಣೆ ಮಾಡಿ ರೈತರ ಬಾಳಿಗೆ ಆಶಾಕಿರಣವಾಗಿರುವುದು. ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಒಂದೇ ಎರಡೇ, ಗುಜರಾತ್ ನಲ್ಲಿ ನರೇಂದ್ರ ಮೋದಿಯವರು ಮಾಡಿರುವ ಅಭಿವೃಧ್ದಿ ಕಾರ್ಯಗಳನ್ನು ನೋಡಿ ದೇಶ ನಿಬ್ಬೆರಗಾಗಿದೆ. ಇಂತಹ ಉತ್ತಮ ಆಡಳಿತಗಾರರನ್ನು ದೇಶದ ಪ್ರಧಾನಿಯನ್ನಾಗಿಸುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಪ್ರಮೀಳಾ ನೇಸರ್ಗಿ ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಅರಳೀಕೆರೆ ರವಿಕುಮಾರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರೇಮಾ ಹೆಗಡೆ, ಪ್ರಧಾನ ಕಾರ್ಯದರ್ಶಿ ನಾಗರತ್ನಮ್ಮ, ಅನಿತಾ ನಂಜುಂಡಯ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಪದ್ಮಾವತಿ ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷೆ ಉಮಾ ಮೊದಲಾದವರು ಇದ್ದರು. ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ಮಮತಾ ಅಶೋಕ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕು ಕಾರ್ಯದರ್ಶಿ ಜಯಶೀಲ ರಘು ಸ್ವಾಗತಿಸಿದರು. ಉಮಾ ಮೋಹನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement