ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಲಂ ಯುವಜನರು ಚುನಾವಣೆ ಸರಕಾಗಬಾರದು

Rashmi Kasaragodu
Updated On : 7 Apr 2014, 1:04 am

ತುಮಕೂರು: ಸ್ಲಂ ಯುವಜನರು ಚುನಾವಣೆಯ ಸರಕಾಗಬಾರದು ಎಂದು ಸ್ಲಂ ಜನಾಂದೋಲನಾ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಅವರು ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿಯ ಅಂಗವಾಗಿ ಜಿಲ್ಲಾ ಕೊಳಗೇರಿ ನಿವಾಸಿಗಳ          ಹಿತರಕ್ಷಣಾ ಸಮಿತಿ ಮತ್ತು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಅಸಂಘಟಿತ ಯುವ  ಜನರ ಮುಂದಿರುವ ಸವಾಲುಗಳ ಬಗ್ಗೆ  ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಸಂಘಟಿತ ವಲಯದ ಕಾರ್ಮಿಕರಿಗೆ ಯಾವುದೇ ಸಾಮಾಜಿಕ ಭದ್ರತೆಯಿಲ್ಲದೆ ಅತಂತ್ರ ಸ್ಥಿತಿಯ ಜೀವನವನ್ನು ನಡೆಸುತ್ತಿದ್ದಾರೆ. ದೇಶದ ಶೇ. 76 ರಷ್ಟು ಜನರು ಅಸಂಘಟಿತವಲಯದಲ್ಲಿ ದುಡಿಯುತ್ತಿದ್ದಾರೆ. ಇವರೆ ರಾಷ್ಟ್ರದ ಆರ್ಥಿಕ ಆಯಾಮದ ಪ್ರಮುಖ ಚಲನ ಶಕ್ತಿಯಾಗಿದ್ದಾರೆ. ಆದರೆ ಇವರನ್ನು ಆಳುವ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ಇವರು ಯಾವುದೆ ಭದ್ರತೆ  ಇಲ್ಲದ ಪರಿಸ್ಥಿತಿಯಲ್ಲಿ ದುಡುಯುತ್ತಿರುವುದರಿಂದ  ತಮ್ಮ ಜೀವಿತ ಅವದಿ ಕಡಿಮೆಯಾಗಿದೆ. ರಾಷ್ಟ್ರದ ಒಟ್ಟು ತೆರಿಗೆಯಲ್ಲಿ ಹಣವನ್ನು ಈ ವಲಯಕ್ಕೆ ಸರ್ಕಾರ ನೀಡಿದೆ. ಇವರಿಗೆ ಸಾಮಾಜಿಕ ಮತ್ತು ಸೇವಾ ಭದ್ರತೆಯನ್ನು ನೀಡಬಹುದು. ಆದರೆ ಸರ್ಕಾರಗಳು ಸಾಮಾಜಿಕ
ತಾರತ್ಯಾಮದ ಪ್ರತೀಕವಾಗಿ ದುಡಿಯುವ ವರ್ಗವನ್ನು ಕಡೆಗಣಿಸಿರುವುದು ವಿಷಾದನೀಯವಾಗಿದೆ ಎಂದು ತಿಳಿಸಿದರು. ಅಸಂಘಟಿತ ವಲಯದ ಕಾರ್ಮಿಕರು ಸಂಘಟಿತವಾಗುವುದರ ಮೂಲಕ ತಮಗೆ ದಕ್ಕಬೇಕಾದ ಪಾಲುನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ದೂರವಿರಿ: ಈ ಚುನಾವಣೆಯಲ್ಲಿ ಪಕ್ಷಗಳಿಗೆ ಪ್ರಚಾರದ ಸರಕಾಗದೆ ಸ್ವಾಭಿಮಾನದಿಂದ ಅಸಂಘಟಿತ ವಲಯದಲ್ಲಿರುವ ಯುವಜನರು ಮತ ಚಲಾಯಿಸಬೇಕು ಅದರಲ್ಲೂ ವರ್ಣ ವ್ಯವಸ್ಥೆಯನ್ನು ಮತ್ತು ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುವ ಬಿಜೆಪಿಯಿಂದ ಸ್ಲಂ ಯುವಜನತೆ ದೂರವಿರಬೇಕೆಂದು ಮನವಿ ಮಾಡಿದರು.  ಪ್ರೊ. ಕೆ. ದೊರೈರಾಜ್ ಮಾತನಾಡಿ ಕಾರ್ಮಿಕರು ನಿರ್ಲಕ್ಷ್ಯವಾಗಿರುವುದರ ಜೊತೆಗೆ ಅಸಂಘಟಿತ ಕಾರ್ಮಿಕರ ಸಂಘಟನೆಗಾಗಿ ಶ್ರಮಿಸಿದ ನಾಯಕರನ್ನು ನಿರ್ಲಕ್ಷ್ಯಗೊಳಗಾಗಿದ್ದಾರೆ. ಬಾಬು ಜಗಜೀವನ್ ರಾಮ್ ಅವರು 1926 ರಲ್ಲಿಯೇ ಬಿಹಾರ ಮತ್ತು ಕೊಲ್ಕತ್ತದಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ಸಂಘಟನೆ ಮಾಡಿದರು. ಇವರು ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕ ಪ್ರತಿನಿಧಿಗಳು ಆಡಳಿತ ವ್ಯವಸ್ಥೆಯಲ್ಲಿ ಇರಬೇಕೆಂದು ತಿಳಿಸಿದರು.
ಕಾರ್ಮಿಕರನ್ನು ಶೋಷಿಸಲು ಪೂರಕವಾಗಿದ್ದ ಬ್ರಿಟಿಷ್ ಕಾನೂನನ್ನು ಬದಲಾವಣೆ ಮಾಡಿ ಕೈಗಾರಿಕ ಪ್ರಭುತ್ವದ(ಬಹುತ್ವದ ಪ್ರಭುತ್ವ ) ದಲ್ಲಿ ಕಾರ್ಮಿಕರೆಲ್ಲರು ಸಮಾನತೆಯಿಂದ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡಿದರು.
ಘನತೆ ನೀಡಿ: ಭಾರತದ ಹಿಂದು ಧರ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಳ ಜಾತಿಗಳನ್ನು ಪುಕ್ಕಟೆ ದುಡಿಸಿಕೊಳ್ಳಲು ವ್ಯವಸ್ಥೆ ದೈಹಿಕ ಶ್ರಮವನ್ನು ಮಾಡುವವರನ್ನು ಕೀಳೆಂದು ತೋರಿಸಿದೆ ಆದರೆ ದೈಹಿಕ ಶ್ರಮಕ್ಕೆ ತಕ್ಕದಾದ ಕೂಲಿ ಮತ್ತು ಮಾನವ ಘನತೆ ನೀಡಬೇಕೆಂದು ಆಗ್ರಹಿಸಿದರು. ವ್ಯವಸ್ಥೆಯಲ್ಲಿ ತಾರತಮ್ಯ ಹೋಗಲಾಡಿಸಬೇಕು. ಆದರೆ ಮೋದಿಯ ಹಿಂದುತ್ವ ಪ್ರತಿಪಾಧಿಸುವ ಮೈಗಳ್ಳ ಸಂಸ್ಕೃತಿಯನ್ನು ವಂಚಿತ ಅಸಂಘಟಿತ ಯುವಜನರು ತಿರಸ್ಕರಿಬೇಕೆಂದು ಕರೆ ನೀಡಿದರು.
ಈ ಕಾರ್ಯಾಗಾರದಲ್ಲಿ ಹಮಾಲಿ ಕಾರ್ಮಿಕರ ಪರವಾಗಿ ಇಂದ್ರ, ಮುರುಗ, ಗಣೇಶ್, ಮನೆ ಕೆಲಸದ ಕಾರ್ಮಿಕರ ಪರವಾಗಿ ಗಂಗಮ್ಮ, ರೇಷ್ಮ ರವರು ಉಪಸ್ಥಿತರಿದ್ದರು. ಕೊಳಗೇರಿ ಸಮಿತಿಯ ರಾಮಕ್ಕ, ನಗರ ವಂಚಿತ ಸಂಪನ್ಮೂಲ ಕೇಂದ್ರದ ಶೆಟ್ಟಾಳಯ್ಯ, ರಾಮಯ್ಯ, ಅರುಣ್, ಕೋಮಲ, ಲತ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement