ಕುಡಿಯುವ ನೀರು ಸರಬರಾಜಿಗೆ ಅನುದಾನ ಬಿಡುಗಡೆ
ತುಮಕೂರು: ತುಮಕೂರು ಜಿಲ್ಲೆಯ 9 ತಾಲೂಕುಗಳಲ್ಲಿ ಹಾಲಿ ಇರುವ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿರುವುದರಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಪ್ರತಿ ತಾಲೂಕಿನ ತಹಸೀಲ್ದಾರರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಈ ಕೆಳಕಂಡಂತೆ ಅನುದಾನ ಬಿಡುಗಡೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ತುಮಕೂರು ತಾ.10 ಲಕ್ಷ, ಕುಣಿಗಲ್ ತಾ.15 ಲಕ್ಷ, ಗುಬ್ಬಿ ತಾ.15 ಲಕ್ಷ, ತಿಪಟೂರು ತಾ.10 ಲಕ್ಷ, ತುರುವೇಕೆರೆ ತಾ.10 ಲಕ್ಷ, ಚಿ.ನಾ.ಹಳ್ಳಿ ತಾ.15 ಲಕ್ಷ, ಮಧುಗಿರಿ ತಾ.10 ಲಕ್ಷ, ಕೊರಟಗೆರೆ ತಾ.10 ಲಕ್ಷ, ಶಿರಾ ತಾಲೂಕು 10 ಲಕ್ಷ ಸೇರಿದಂತೆ ಒಟ್ಟು 105ಲಕ್ಷ ರು.ಗಳನ್ನು ಡಿಸಿ ಬಿಡುಗಡೆ ಮಾಡಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿರುವ, ಆಳಕ್ಕೆ ಹೋಗಿರುವ, ಜಲದ ಮೂಲ ಬತ್ತಿಹೋಗಿದೆ ಎಂದು ವರದಿ ಬಂದಿದ್ದು, ಜಿಲ್ಲೆಯ ಜನರಿಗೆ ಮತ್ತು ಜಾನುವಾರುಗಳಿಗೆ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.