ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆಎಸ್‌ಕೆ, ಜೆಸಿಎಂ ಇಬ್ಬರಿಗೂ ಭವ್ಯ ಭವಿಷ್ಯ

Lingaraj Badiger
Updated On : 8 Apr 2014, 11:04 am

ಹುಳಿಯಾರು: ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಪ್ರಭಾವಿ ನಾಯಕರುಗಳಾಗಿ ಜನರ ಪ್ರೀತಿ ವಿಶ್ವಾಸಗಳಿಸಿರುವ ಮಾಜಿ ಶಾಸಕರಾದ ಕೆ.ಎಸ್. ಕಿರಣ್‌ಕುಮಾರ್ ಹಾಗೂ ಜೆ.ಸಿ.ಮಾಧುಸ್ವಾಮಿ ಅವರು ಈ ಭಾಗದಲ್ಲಿ ಸಾಕಷ್ಟು ಕೆಲಸ  ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಇಬ್ಬರಿಗೂ ಉತ್ತಮ ಸ್ಥಾನ ಕಲ್ಪಿಸಿಕೊಟ್ಟು ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗುವಂತೆ ಮಾಡುವುದಾಗಿ ತುಮಕೂರು ಲೋಕಸಭಾ ಅಭ್ಯರ್ಥಿ ಜಿ.ಎಸ್. ಬಸವರಾಜು ಭರವಸೆ ನೀಡಿದರು.
ಇಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ದೇಶದ ಮುಂದೆ ಇರುವ ಗುರಿ ಮೋದಿ ಪ್ರಧಾನಿಯಾಗುವುದು. ಅದನ್ನು ಕೈಗೂಡಿಸಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಗೆಲ್ಲಲು ಪ್ರಯತ್ನಿಸಬೇಕೆಂದರು.
ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಮಾತನಾಡಿ, ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದರೆ ಅದು ನಮಗೆ ತೊಡಕಾಗಿ ನಮ್ಮ ವಿರೋಧಿಗಳಿಗೆ ಸಹಾಯಕವಾಗುತ್ತದೆ. ಇದನ್ನರಿತು ಕಾರ್ಯಕರ್ತರು ತಮ್ಮಲ್ಲಿನ ಅಸಮಾಧಾನವನ್ನು ಕೈಬಿಟ್ಟು , ಕ್ಷೇತ್ರಕ್ಕೆ ನೀರಾವರಿ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕಾರ್ಯರೂಪಕ್ಕೆ ತಂದಿರುವ ಜಿ.ಎಸ್.ಬಸವರಾಜು ಅವರನ್ನು ಬೆಂಬಲಿಸಿ ಆರಿಸಿ ಕಳುಹಿಸಿ ಎಂದರು. ದೇಶದ ಅಭಿವೃದ್ಧಿಗೆ ಮೋದಿಯವರನ್ನೇ ಪ್ರಧಾನಮಂತ್ರಿಯನ್ನಾಗಿ ಮಾಡುವಲ್ಲಿ ಶ್ರಮಿಸೋಣ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಮಾಜಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಜಿ.ಪಂ.ಸದಸ್ಯ ಪಂಚಾಕ್ಷರಿ,
ತಾ.ಪಂ.ಅಧ್ಯಕ್ಷ ನವೀನ್, ಸದಸ್ಯರಾದ ವಸಂತಯ್ಯ, ಸೀತಾರಾಮಯ್ಯ, ಮುಖಂಡರಾದ ಬುಳ್ಳೇನಹಳ್ಳಿ ಶಿವಪ್ರಕಾಶ್, ವೈ.ಕೆ.ರಾಮಯ್ಯ, ಹನುಮಂತಪ್ಪ, ರಾಮಯ್ಯ, ರಾಜಣ್ಣ, ಮಲ್ಲಿಕಣ್ಣ, ಕುಮಾರ್, ರಮೇಶ್‌ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement