ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಖಾಸಗಿ ಮೀಸಲು ಹಸಿಸುಳ್ಳು

Rashmi Kasaragodu
Updated On : 8 Apr 2014, 10:36 am

ತುಮಕೂರು: ಖಾಸಗಿ ರಂಗದಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಕಾಂಗ್ರೆಸ್ ಭರವಸೆ ಶುದ್ಧ ಸುಳ್ಳು ಎಂದು ಆರ್ಥಿಕ ತಜ್ಞ , ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟೀಕಿಸಿದರು.
ಖಾಸಗಿ ರಂಗದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಹೀಗಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವ ಖಾಸಗಿ ಮೀಸಲು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.
ತುಮಕೂರಿನಲ್ಲಿ 'ಸಮಗ್ರ ಭಾರತದ ವಿಕಾಸಕ್ಕಾಗಿ ಮೋದಿ- ಒಂದು ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಬೇಕಿದ್ದರೆ ಕೆಲ ರಿಯಾಯ್ತಿಗಳನ್ನು ನೀಡಲಿ. ಆದರೆ ಒಂದು ತಲೆಮಾರಿನ ನಂತರ ಮೀಸಲು ಮುಂದುವರೆಸುವುದು ಬೇಕಿಲ್ಲ ಎಂದು ಅಭಿಪ್ರಾಯಪಟ್ಟರು.  ಎನ್‌ಡಿಎ ಸರ್ಕಾರ ಬಂದರೆ ಮೀಸಲು  ನಿಲ್ಲಿಸುತ್ತೀರಾ ಎಂಬ ಪ್ರಶ್ನೆಗೆ, 'ಮೀಸಲು ಸೌಲಭ್ಯದಿಂದ ಮೇಲೆ ಬಂದವರು ಸ್ವತಃ ಬೇಡ ಅಂದ ಮೇಲೆ ನಿಲ್ಲಿಸಬೇಕು. ಈ ಕುರಿತು ಸಂಬಂಧಪಟ್ಟ ಜಾತಿವಾರು ಮುಖಂಡರನ್ನು ಕರೆದು ತೀರ್ಮಾನಿಸುವುದು ಸರ್ಕಾರಕ್ಕೆ ಬಿಟ್ಟ ವಿಷಯ' ಎಂದು ಹಾರಿಕೆಯ ಉತ್ತರ ನೀಡಿದರು.
ಪಂಡಿತ ನೆಹರೂ ಅಲ್ಲ, ಅಂಬೇಡ್ಕರ್: ಪಂಡಿತ ಅನ್ನೋ ಪದವಿ, ಬಿರುದಿಗೆ ಜವಾಹರ್‌ಲಾಲ್ ನೆಹರೂ ಅರ್ಹರಲ್ಲ. ಪಂಡಿತ ಅನ್ನೋ ಬಿರುದು ಪಡೆಯಲು ನಿಜವಾಗಿಯೂ ಅರ್ಹರಾದ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಹಿಂದುಳಿದ ಜಾತಿಯಲ್ಲಿ ಹುಟ್ಟಿದ ಅಂಬೇಡ್ಕರ್ ಬೆಳೆದು ಬಂದ ಬಗೆ, ಎದುರಿಸಿದ ಕಷ್ಟ, ನಷ್ಟಗಳು, ಅವರ ಪ್ರತಿಭೆಯ ಅನಾವರಣ, ಸಂಶೋಧನೆಗಳು, ಅಂದಿಗೆ ಪಡೆದ ವಿದೇಶಿ ಪದವಿಗಳು, ಅಸಾಧಾರಣ ವಿದ್ವತ್ತು ಎಲ್ಲವನ್ನು ಕೂಲಂಕುಶವಾಗಿ ಪರಿಗಣಿಸಿದಲ್ಲಿ ನಿಜಕ್ಕೂ ಅಂಬೇಡ್ಕರ್ ಪಂಡಿತ ಪದವಿಗೆ ಅರ್ಹ ವ್ಯಕ್ತಿ ಎಂದು ಸುಬ್ರಮಣಿಯನ್ ಸ್ವಾಮಿ ವಿಶ್ಲೇಷಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement