ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಗುಡಿಸಲು ರಹಿತ ಗ್ರಾಮವನ್ನಾಗಿಸುವೆ'

Lingaraj Badiger
Updated On : 8 Apr 2014, 11:04 am

ತಿಪಟೂರು: ತುಮಕೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಲ್.ಪಿ. ಯದುನಂದನ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ನಡೆಸಿದರು.
 ಈ ವೇಳೆ ಮಾತನಾಡಿದ ಯದುನಂದನ ನಾನು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ, ನಿರಂತರ ವಿದ್ಯುತ್ ಸಂಪರ್ಕ, ಕೃಷಿ ರೈತರಿಗೆ ಸಂಪೂರ್ಣ ಸಾಲಮನ್ನಾ, ಕೃಷಿ ಟ್ರ್ಯಾಕ್ಟರ್ ಸಾಲಮನ್ನಾ ಮತ್ತು ಹಿಂದುಳಿದ, ದಲಿತರ, ಅಲ್ಪಸಂಖ್ಯಾತರ ಹಾಸ್ಟೆಲ್‌ಗಳನ್ನು ಹೈಟೆಕ್ ಹಾಸ್ಟೆಲ್‌ಗಳನ್ನಾಗಿ ಮಾಡಲು ಮತ್ತು ಗುಡಿಸಲು ರಹಿತ ಗ್ರಾಮ ಹಾಗೂ ತುಮಕೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದಾಗಿ ತಿಳಿಸಿದರು.  ಲೋಕಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಒಬ್ಬರ ಮೇಲೊಬ್ಬರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಕೆಸರು ಎರಚಾಡುವ ಮಾತುಗಳನ್ನಾಡುವುದನ್ನು ಬಿಟ್ಟು ಅವರವರ ಪ್ರಣಾಳಿಕೆ ಮತ್ತು ಬೇಡಿಕೆಗಳನ್ನು ಜನರಿಗೆ ತಿಳಿಸಿ ಮತಯಾಚನೆ ಮಾಡಲು ತಿಳಿಸಿದರು. ಚುನಾವಣೆಯಲ್ಲಿ ನನ್ನ ಗುರುತಾದ ಫ್ಯಾನ್‌ಗೆ ತಮ್ಮ ಅಮೂಲ್ಯವಾದ ಮತ ನೀಡಿ ಜಯಶೀಲನನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement