ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಗಜೀವನರಾಂ ಜನ್ಮದಿನಾಚರಣೆ

Rashmi Kasaragodu
Updated On : 8 Apr 2014, 10:39 am

ಚಿಕ್ಕನಾಯಕನಹಳ್ಳಿ: ಚುನಾವಣಾ ನೀತಿ ಸಂಹಿತೆ ಪ್ರಭಾವದಿಂದಾಗಿ ಸಮಾಜಕಲ್ಯಾಣ ಇಲಾಖೆ ವತಿಯಿಂದ ಭಾರತದ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ತಾಲೂಕು ಪಂಚಾಯ್ತಿ  ಸಭಾಂಗಣದಲ್ಲಿ ನಡೆದ  ಸರಳ ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಾಯಕ್ ಮಾತನಾಡಿ ಶೋಷಿತರ ದನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ನಂತರ ದಲಿತರ ಹಕ್ಕುಗಳಿಗಾಗಿ ಹೋರಾಡಿದ ಮತ್ತೋರ್ವ ನಾಯಕ ಜಗಜೀವನರಾಂ. ಅವರು ಭಾರತದ ಉಪಪ್ರಧಾನಿ ಪಟ್ಟದವರೆಗೂ ರಾಜಕೀಯ ಸ್ಥಾನಮಾನಗಳನ್ನು  ಪಡೆದವರು. ಅವರೆಂದು ಅಧಿಕಾರದಿಂದ ಬೀಗಿಲಿಲ್ಲ. ಅದು ಅವರ ಸಜ್ಜನಿಕೆಗೆ ಸಾಕ್ಷಿಯಾಗಿದೆ ಎಂದರು. ಸಮಾಜ ಕಲ್ಯಾಣಾಧಿಕಾರಿ ರಾಮಯ್ಯ, ಸಿಡಿಪಿಓ ಅನೀಸ್ ಖೈಸರ್, ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಟಿ.ಆರ್. ವೆಂಕಟೇಶ ಶೆಟ್ಟಿ, ದಲಿತ ಮುಖಂಡ ಸತೀಶ್ ಮುಂತಾದವರಿದ್ದರು.      

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement