ನೊಂದವರ ಪರ ಧ್ವನಿ ಎತ್ತಲು ಸ್ಪರ್ಧೆ
ತುಮಕೂರು: ನೊಂದವರು, ಶೋಷಿತರ ಹಾಗೂ ಧ್ವನಿ ಇಲ್ಲದವರ ಪರ ಧ್ವನಿ ಎತ್ತುವ ಸಲುವಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದು ಕೆ.ವಿ. ಶ್ರೀನಿವಾಸ ಕಲ್ಕೆರೆ ತಿಳಿಸಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಯಾವುದೇ ಕ್ಷೇತ್ರದ ಸಂಸದರು ಶೋಷಿತರ ಪರ ಧ್ವನಿಯೆತ್ತದೇ ಕೇವಲ ಆಯ್ಕೆಯಾದ ಪಕ್ಷದ ಅಜೆಂಡಾದಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಶೋಷಿತರ ಪರ ಮಾತನಾಡುವ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಗೆದ್ದ ನಂತರ ಮರೆಯುತ್ತಿದ್ದಾರೆ ಎಂದರು.