ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಾಮಾಣಿಕ ಕೆಲಸಗಾರರನ್ನು ಜನ ಗುರುತಿಸುತ್ತಾರೆ: ಜಯಪ್ರಕಾಶ್

Lingaraj Badiger
Updated On : 8 Apr 2014, 11:04 am

ತುಮಕೂರು: ಪ್ರಾಮಾಣಿಕವಾಗಿ ಕೆಲಸ ಮಾಡಿದವರನ್ನು ಜನ ಗುರುತಿಸುತ್ತಾರೆ ಎಂದು ತುಮಕೂರಿನ ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್ ಹೇಳಿದರು.
ಅವರು ಚಿಕ್ಕನಹಳ್ಳಿ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಎನ್ ನಾಗಪ್ಪ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ತಮಗೆ ಕೊಟ್ಟ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದಾಗ ಜನ ಗುರುತಿಸುತ್ತಾರೆ. ಅಲ್ಲದೇ ಹೇಳುವುದು ಒಂದು ಮಾಡುವುದು ಮತ್ತೊಂದು ಎಂದಾಗ ಜನಕ್ಕೆ ಗೊತ್ತಾಗುತ್ತದೆ ಎಂದರು. ತಮ್ಮ ಕೆಲಸದಲ್ಲಿ ಆತ್ಮವಂಚನೆ ಮಾಡಿಕೊಳ್ಳಬಾರದು ಎಂದು ತಿಳಿಸಿ ಈ ನಿಟ್ಟಿನಲ್ಲಿ ಎನ್. ನಾಗಪ್ಪ ಅವರ ಸೇವೆಯನ್ನು ಹೃದಯ ತುಂಬಿ ಪ್ರಶಂಸಿಸಿದರು.
ಎನ್. ನಾಗಪ್ಪನವರ ಅವಧಿಯಲ್ಲಿ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ. ಕಾಲೇಜಿನಲ್ಲಿ ಎಲ್ಲಾ ಉಪನ್ಯಾಸಕರ ಜೊತೆ ಸ್ನೇಹ ಸೌಹಾರ್ದ ವಾತಾವರಣದಿಂದ ನಡೆದುಕೊಂಡಿದ್ದಾರೆ. ಇಡೀ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಒಂದು ಒಳ್ಳೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ಉಂಟು ಮಾಡಿರುವ ನಾಗಪ್ಪನವರ ನಿವೃತ್ತಿ ಜೀವನ ಶುಭವಾಗಲಿ ಎಂದು ಆಶಿಸಿದರು.
ಎನ್. ನಾಗಪ್ಪನವರ ನಂತರ ಹಿರಿಯ ಇಂಗ್ಲಿಷ್ ಉಪನ್ಯಾಸಕರು ಎಚ್.ಎಸ್. ಯಶವಂತ ಅವರಿಗೆ ಪ್ರಭಾರ ಪ್ರಾಂಶುಪಾಲರನ್ನಾಗಿ ಅಧಿಕಾರ ವಹಿಸಿಕೊಡಲಾಯಿತು. ಡಿ. ಲಕ್ಷ್ಮಪ್ಪ ಸ್ವಾಗತಿಸಿದರು. ಶೀಲವಂತರ್ ವಂದಿಸಿದರು. ಎಂ. ಶಂಕರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement