ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯುಪಿಎ ಸರ್ಕಾರದ ಭ್ರಷ್ಟ ಆಡಳಿತ

Rashmi Kasaragodu
Updated On : 8 Apr 2014, 10:36 am

ಶಿರಾ:  ಕೇಂದ್ರದ ಯುಪಿಎ ಸರ್ಕಾರದ  ಭ್ರಷ್ಟ ಆಡಳಿತದಿಂದ ಮತದಾರ ರೋಸಿ ಹೋಗಿದ್ದು,  
ಈ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು  ತಿರಸ್ಕರಿಸಲಿದ್ದಾನೆ.  ಕೇಂದ್ರದಲ್ಲಿ  ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು  ಸರ್ಕಾರ ರಚನೆಗೆ ಬೇಕಾದ ಬಹುಮತ ಗಳಿಸಲು ವಿಫಲವಾಗಲಿದ್ದು,   ರಚನೆಯಾಗುವ ಹೂಸ ಸರ್ಕಾರದಲ್ಲಿ   ತೃತೀಯ ರಂಗ ಮಹತ್ವದ ಪಾತ್ರ ವಹಿಸಲಿದೆ. ಇದರಿಂದ ಎಚ್.ಡಿ.ದೇವೆಗೌಡರ ಕೈ ಬಲಪಡಿಸುವ ನಿಟ್ಟಿನಲ್ಲಿ   ಜೆಡಿಎಸ್ ಬೆಂಬಲಿಸಿ ಪಕ್ಷದ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಗೆಲವಿಗೆ ಶ್ರಮಿಸುವಂತೆ  ಕಾರ್ಯಕರ್ತರಿಗೆ  ಮಾಜಿ ಸಚಿವ ಬಿ. ಸತ್ಯನಾರಾಯಣ ಕರೆ ನೀಡಿದರು.
ಅವರು ಶಿರಾ ತಾಲೂಕಿನ ತಾವರೆಕೆರೆಯಲ್ಲಿ  ನಡೆದ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಜೆಡಿಎಸ್  ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿದರು.  ರಾಜ್ಯದಲ್ಲಿ ಮೋದಿ ಅಲೆ ಇದೆ ಎಂಬುದು ಬಿಜೆಪಿ ಭ್ರಮೆಯಷ್ಟೇ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೈಗೊಂಡ  ರೈತ ಮತ್ತು ಜನಪರ ಕಾರ್ಯಕ್ರಮಗಳು ಜೆಡಿಎಸ್ ಗೆಲವಿಗೆ ಸಹಕಾರಿಯಾಗಲಿದೆ ಎಂದರು.  
ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಮಾತನಾಡಿ ಈ ಕ್ಷೇತ್ರ ಪ್ರತಿನಿಧಿಸುವ ಸಂಸದರು  ಕಳೆದ ಐದು ವರ್ಷಗಳಿಂದ  ಗ್ರಾಮೀಣ ಪ್ರದೇಶದ ರೈತರಿಗಾಗಲಿ, ಜನಸಾಮಾನ್ಯನಿಗಾಗಲಿ ಸ್ಪಂದಿಸಿಲ್ಲ. ಬರದಿಂದ ತತ್ತರಿಸಿರುವ ಚಿತ್ರದುರ್ಗ ಜಿಲ್ಲೆ ಮತ್ತು  ತುಮಕೂರು ಜಿಲ್ಲೆಯ ಪಾವಗಡ, ಶಿರಾ ತಾಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸುವುದಕ್ಕೆ ಉತ್ಸುಕನಾಗಿದ್ದು ನನಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲಾ ಜೆಡಿಎಸ್  ಅಧ್ಯಕ್ಷ ಡಿ.ಯಶೋಧರ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್,  ಮುಖಂಡರಾದ  ಪ್ರಕಾಶ್‌ಗೌಡ, ಕಲ್ಕೆರೆರವಿಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ರಾಮು, ತಾಪಂ ಸದಸ್ಯರಾದ ಸತ್ಯಪ್ರಕಾಶ್, ಟಿ.ವಿನಯ್, ಗೋವಿಂದರಾಜು, ಕೆ.ಮಂಜುನಾಥ್, ಉಗ್ರಪ್ಪ, ಚಂದ್ರಶೇಖರ್, ಗೋಣಿಹಳ್ಳಿ ಮಂಜುನಾಥಗೌಡ ಸೇರಿದಂತೆ ಹಲವರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement