ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕವಿತೆ ಜೀವನ್ಮುಖಿಯಾಗಿರಲಿ

Mainashree
Updated On : 24 Apr 2014, 12:24 pm

ತುಮಕೂರು: ಕವಿತೆ ಜೀವನ್ಮುಖಿ, ಜನಮುಖಿಯಾಗಿರಬೇಕು ಎಂದು ಕವಿ ಹಾಗೂ ತುಮಕೂರು ಜಿಲ್ಲಾ ಸರ್ಜನ್ ಆಗಿರುವ ಡಾ.ಟಿ.ಎ. ಈಶ್ವರಯ್ಯ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಶೈನಾ ಅಧ್ಯಯನ ಸಂಸ್ಥೆ ವತಿಯಿಂದ ಏರ್ಪಾಟಾಗಿದ್ದ ಚೈತ್ರ ಕಾವ್ಯಯಾನ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯ ಹಸಿರು ಚಿಗುರು ಕಾವ್ಯ ರಚನೆಗೆ ಪ್ರೇರಣೆ ನೀಡುತ್ತದೆ. ಚೈತ್ರ ಮಾಸ ನಿಜವಾಗಿಯೂ ಕವಿಯ ಮಾಸವೆಂದೇ ಹೇಳಬಹುದು. ದೌರ್ಬಲ್ಯಗಳನ್ನು ನಿಭಾಯಿಸಿಕೊಂಡು ಕಾವ್ಯ ರಚಿಸಿದಾಗ ಕವಿಗೆ ಜನಮನ್ನಣೆ ಸಿಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕವಿ ಬಾಪುಜ ಮಾತನಾಡಿ, ಪ್ರತಿಭೆ ದೈವದತ್ತವಾದುದು. ಕಾವ್ಯಕ್ಕೆ ಸಂತೋಷ ನೀಡುವ ಗುಣವಿರುತ್ತದೆ. ಪ್ರತಿ ಕವಿಗೂ ಭಿನ್ನ-ಬಿನ್ನ ಗುಣಗಳಿರುತ್ತವೆ. ಆದ್ದರಿಂದ ಕಾಲ ಕೂಡ ಕವಿಯಿಂದ ಕವಿಗೆ ಭಿನ್ನವಾಗಿರುತ್ತದೆ ಎಂದರು.
ಸದಾ ಜೀವಂತ: ಮತ್ತೊಬ್ಬ ಮುಖ್ಯ ಅತಿಥಿ ಹರಳೂರು ಶಿವಕುಮಾರ್ ಮಾತನಾಡಿ, ಕಾವ್ಯದ ಅನುಭಾವಿಕ ನೆಲೆ ಅದರ ಪಕ್ವತೆಯ ಗುರುತು. ಸಹೃದಯನನ್ನು ಸೆಳೆಯುವ ಕಾವ್ಯ ಮತ್ತೆ - ಮತ್ತೆ ಓದಿಸಿಕೊಂಡು ಕಾಲ-ಕಾಲಕ್ಕೂ ಉಳಿಯುತ್ತದೆ. ಆದ್ದರಿಂದಲೇ ಉತ್ತಮ ಕವಿತೆ ಚಿರಂತನವಾದುದು ಹಾಗೂ ಸದಾ ಜೀವಂತವಾದುದು ಎಂದು ಅಭಿಪ್ರಾಯಪಟ್ಟರು. ಕವಿ ತುರಾಸು ಮಾತನಾಡಿ, ಕಾವ್ಯ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ. ಯಾವ ಕವಿಯೂ ಓದುಗರನ್ನು ಬಿಟ್ಟುಕೊಡಲಾರ ಎಂದರು.
ಕವಯತ್ರಿ ಪದ್ಮಾ ಕೃಷ್ಣಮೂರ್ತಿ ಮಾತನಾಡಿ, ಯಾವುದೇ ಸಾಹಿತ್ಯದ ನಿಜವದಾ ಶಕ್ತಿಯೆಂದರೆ ಕಾವ್ಯ. ಕವಿತೆ ಬರೆಯದ ಬರಹಗಾರ ಇರಲಾರ. ಅದರಲ್ಲೂ ಚೈತ್ರಮಾಸ ಕಾವ್ಯವನ್ನು ಬರೆಸೇ ತೀರುತ್ತದೆ. ಚೈತ್ರ ಕಾವ್ಯಯಾನ ಇದು ಕವಿಯ ನಿಜವಾದ ಪಯಣದ ತಿಂಗಳೇ ಆಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement