ಕೃಷಿ ಹೊಂಡಕ್ಕೆ ಬಿದ್ದು ಮಕ್ಕಳಿಬ್ಬರ ಸಾವು
ತೀರ್ಥಹಳ್ಳಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕ್ಕಡ್ತಿಯಲ್ಲಿ ಬುಧವಾರ ಸಂಭವಿಸಿದೆ. ಮನೋಜ್(12) ಹಾಗೂ ಸಾನವಿ(8) ಮೃತರು. ರಜೆ ಇದ್ದ ಕಾರಣ ಸಾನವಿಯು ಕೊಕ್ಕಡ್ತಿಯ ಮಾವನ ಮನೆಗೆ ಬಂದಿದ್ದು, ಮನೋಜ್ ಜತೆ ಆಟವಾಡಲು ಕೃಷಿ ಹೊಂಡದ ಬಳಿ ಹೋಗಿದ್ದರು. ಆದರೆ, ಕಾಲು ಜಾರಿ ಬಿದ್ದು ಸಾವು ಕಂಡಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.