ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೊಸ ತಂತ್ರಜ್ಞಾನದಿಂದ ವಿದ್ಯುತ್ ನಷ್ಟ ತಡೆಗೆ ಕರೆ

Mainashree
Updated On : 24 Apr 2014, 12:24 pm

ತುಮಕೂರು: ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ 5 ದಿನಗಳ ವಿದ್ಯುತ್ ಹಾಗೂ ವಿದ್ಯುನ್ಮಾನ ವಿಭಾಗದಿಂದ ವಿದ್ಯುತ್ ಸರಬರಾಜು ಹಾಗೂ ವಿತರಣೆ ಕುರಿತಂತೆ 5 ದಿನಗಳ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಕೆಪಿಟಿಸಿಎಲ್ ಉಪನಿರ್ದೇಶಕ ವಿ. ಭರತೇಶರಾವ್ ಮಾತನಾಡಿ, ವಿದ್ಯುತ್ ಸರಬರಾಜು ಹಾಗೂ ವಿತರಣೆಯಲ್ಲಿ ಆಗಿರುವ ಅಭಿವೃದ್ಧಿ ಕುರಿತಂತೆ ಮಾಹಿತಿ ನೀಡಿದರು. ವಿದ್ಯುತ್ ಸರಬರಾಜಿನಲ್ಲಿ ಆಗುವ ನಷ್ಟಗಳನ್ನು ಹೊಸ ತಾಂತ್ರಿಕತೆಯಿಂದ ಕಡಿಮೆ ಮಾಡಬಹುದೆಂದು ತಿಳಿಸಿದರು.
ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕ ಅಪ್ರತಿಮ ಸಾಧನೆ ಮಾಡಿದ್ದು, ವಿದ್ಯುತ್ ಕ್ಷೇತ್ರದಲ್ಲಿ ಕರ್ನಾಟಕ ಕೃಷಿ ಕ್ಷೇತ್ರಕ್ಕೆ ರಿಯಾಯ್ತಿ ನೀಡುತ್ತಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಿನ್ಸಿಪಾಲ್ ಡಾ.ಕೆ.ಎ. ಕೃಷ್ಣಮೂರ್ತಿ  ಮಾತನಾಡಿ, ಸ್ವಾತಂತ್ರ್ಯ ನಂತರ ವಿದ್ಯುತ್ ಬಳಕೆಯನ್ನು ಹೆಚ್ಚಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ನಷ್ಟಗಳನ್ನು ಕಡಿಮೆ ಮಾಡಲು ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.  ಸಿದ್ದಾರ್ಥ ವಿವಿ ಕುಲಪತಿ ಡಾ.ಎಂ.ಜಡ್. ಕುರಿಯನ್ ಮಾತನಾಡಿದರು. ವಿದ್ಯುತ್ ವಿಭಾಗದ ಮುಖ್ಯಸ್ಥರಾದ ಡಾ ಬಿ. ರಾಜೇಶ್ ಕಾಮತ್ ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ಸಹ ಸಂಚಾಲಕರಾದ ಪ್ರೊ. ಕೆ.ಎಲ್. ರತ್ನಾಕರ್, ಪ್ರೊ.ಎಲ್. ಸಂಜೀವ್ ಕುಮಾರ್, ಪ್ರೊ. ಕೆ.ಆರ್. ಜಗದೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement