ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿ
ಕೊರಟಗೆರೆ: ತಾಲೂಕಿನ ಕಲ್ಲುಗುಟ್ಟರಹಳ್ಳಿ ರೇಂಜರ್ಸ್ ಕ್ರಿಕೆಟರ್ಸ್ ವತಿಯಿಂದ ಗ್ರಾಮದಲ್ಲಿ ತೃತೀಯ ಜಿಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಆಸಕ್ತ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಕೋರಿದ್ದಾರೆ.
ಕಲ್ಲುಗುಟ್ಟರಹಳ್ಳಿ ರೇಂಜರ್ಸ್ ಕ್ರಿಕೆಟರ್ಸ್ ಮತ್ತು ಸಿರಿ ಕನ್ನಡ ಕ್ರೀಡಾ ಮತ್ತು ಕಲಾ ಸಂಘದವತಿಯಿಂದ ಏ. 26 ಶನಿವಾರ ಮತ್ತು 27 ರ ಭಾನುವಾರ ದಂದು ಏರ್ಪಡಿಸಿರುವ ತೃತೀಯ ಜಿಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ತಂಡಗಳು ತಮ್ಮ ತಂಡದೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಕೋರಿದ್ದಾರೆ.
ವಿಜೇತ ತಂಡಗಳಿಗೆ ಪಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯಬಹುಮಾನ 5 ಸಾವಿರ ರು. ನೀಡಲಾಗುವುದು.
ಶಾಸಕ ಪಿ.ಆರ್. ಸುಧಾಕರಲಾಲ್ ವಿಶೇಷ ಅಹ್ವಾನಿತರಾಗಿ ಆಗಮಿಸಲಿದ್ದು ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜಿ.ಎನ್. ನರಸಿಂಹರಾಜು ಪಂದ್ಯಾವಳಿ ಉದ್ಘಾಟಿಸುವರು, ಮಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯರಾದ ಪ್ರೇಮಾ ಮಹಲಿಂಗಪ್ಪ, ಪ್ರಸನ್ನಕುಮಾರ್, ತಾ.ಪಂ. ಅಧ್ಯಕ್ಷ ಅನಿತಾ, ಸದಸ್ಯರಾದ ಬಸವರಾಜು, ಎಲ್.ವಿ. ಪ್ರಕಾಶ್, ಜಿ.ಎಲ್.ಹನುಮಂತರಾಯಪ್ಪ, ರವಿಕುಮಾರ್, ಎ.ಡಿ. ಬಲರಾಮಯ್ಯ, ಕೆ.ಎಲ್. ಮಂಜುನಾಥ್, ಗ್ರಾಪ ಅಧ್ಯಕ್ಷ ವಸಂತ ಗೀತಾ, ಸದಸ್ಯ ವೆಂಕಟಪ್ಪ, ವೆಂಕಟೇಶ್, ಕಾಂತಣ್ಣ, ಪುಟ್ಟ