ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಕ್ರಮ ಮರಳು ಸಾಗಿಸುತ್ತಿದ್ದ 8 ಲಾರಿ ವಶ

Mainashree
Updated On : 27 Apr 2014, 12:18 pm

ಕೊರಟಗೆರೆ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 8 ಲಾರಿಗಳನ್ನು ಕೊರಟಗೆರೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ವಶಪಡಿಸಿಕೊಂಡು 1.60 ಲಕ್ಷ ರು. ದಂಡ ವಿದಿಸಿದ್ದಾರೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಚೆಕ್ ಪೋಸ್ಟ್‌ನಲ್ಲಿ ಕೊರಟಗೆರೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಹಾಗೂ ಪಿಎಸ್‌ಐ ರವಿಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 8 ಲಾರಿಗಳನ್ನು ವಶಕ್ಕೆ ಪಡೆದು ಮರಳನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಿ ಖಾಲಿ ಲಾರಿಗೆ ತಲಾ 20  ಸಾವಿರ ರು.ಗಳಂತೆ ಒಟ್ಟು 1.60 ಲಕ್ಷ ರು. ದಂಡ ವಿಧಿಸಲಾಗಿದೆ.
ತಾಮ್ರ ತಂತಿ ಕಳ್ಳರ ಬಂಧನ: ಪಟ್ಟಣದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಒಡಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕ್ರೈಂ ಪೊಲೀಸರು ತಡೆದು ವಿಚಾರಣೆ ಮಾಡಿದ ಸಂದರ್ಭದಲ್ಲಿ ಅವರ ಬಳಿ ಸುಮಾರು 30 ಸಾವಿರ ರು. ಬೆಲೆ ಬಾಳುವ 250 ಮೀಟರ್ ನಷ್ಟು  ಪಂಪ ಸೆಟ್‌ಗಳ ಮೋಟಾರ್‌ನಲ್ಲಿ ಅಳವಡಿಸುವ ತಾಮ್ರದ ತಂತಿ ಕಂಡು ಬಂದಿದ್ದು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ವಿವಿಧೆಡೆ ರೈತರ ಪಂಪ್ ಸೆಟ್‌ಗಳಲ್ಲಿ ಕಳವು ಮಾಡಿ ಮಾರಾಟ ಮಾಡಲು ತುಮಕೂರಿಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರು ಆರೋಪಿಗಳು ತಮಿಳುನಾಡು ಮೂಲದ ಜಡೆಮುನೇಶ್ವರ ಮತ್ತು ಆನಂದ್ ಎನ್ನಲಾಗಿದೆ.
ಅವರನ್ನು ತಾಮ್ರದ ತಂತಿಯೊಂದಿಗೆ ಇನ್ಸ್‌ಪೆಕ್ಟರ್ ಮಂಜುನಾಥ್ ಬಂಧಿಸಿ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement