ಕೋಳಘಟ್ಟದಲ್ಲಿ ಮರು ಮತದಾನ ಇಂದು
ಕ.ಪ್ರ. ವಾರ್ತೆ ್ಣ ತುರುವೇಕೆರೆ ್ಣ ಏ. 28
ತಾಲೂಕಿನ ಕೋಳಘಟ್ಟದ ಮತಕಟ್ಟೆ ಸಂಖ್ಯೆ 8 ರಲ್ಲಿ ಮಂಗಳವಾರ ಲೋಕಸಭಾ ಚುನಾವಣಾ ಸಂಬಂಧ ಮರು ಮತದಾನ ನಡೆಯಲಿದೆ.
ಕಳೆದ 17 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣೆಗೆ ನೇಮಿಸಲ್ಪಟ್ಟಿದ್ದ ಸಿಬ್ಬಂದಿಯೇ ಬೇರೆಯವರ ಮತವನ್ನು ಹಾಕುವ ಮೂಲಕ ಗೊಂದಲಕ್ಕೆ ಕಾರಣರಾಗಿದ್ದರು. ಈ ಸಂಬಂಧ ನಕಲಿ ಮತದಾನ ಮಾಡಿದ್ದ ಮೊದಲನೇ ಚುನಾವಣಾ ಅಧಿಕಾರಿ ಕೃಷ್ಣಮೂರ್ತಿಯನ್ನು ಒಳಗೊಂಡಂತೆ 4 ಮಂದಿಯನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಕೋಳಘಟ್ಟ ಮತಕಟ್ಟೆಗೆ ಕೋಳಘಟ್ಟ, ನಾಯಕನಘಟ್ಟ ಹಾಗೂ ಕೋಳಘಟ್ಟ ಕಾವಲು ಸೇರಲಿದೆ. ಒಟ್ಟು 770 ಮತದಾರರು ಇದ್ದಾರೆ. ಕಳೆದ ಚುನಾವಣೆಯಲ್ಲಿ 564 ಮತಗಳು ಚಲಾವಣೆಯಾಗಿದ್ದವು. ಈಗ ಮರು ಮತದಾನಕ್ಕೆ ಆದೇಶ ನೀಡಲಾಗಿದೆ. ಕಾಂಗ್ರೆಸ್ ನಿಂದ ಮುದ್ದಹನುಮೇಗೌಡ, ಬಿಜೆಪಿಯಿಂದ ಜಿ. ಎಸ್. ಬಸವರಾಜು, ಜೆಡಿಎಸ್‌ನಿಂದ ರಾಜ್ಯ ಜೆಡಿಎಸ್ ಅಧ್ಯಕ್ಷರಾಗಿದ್ದ ಎ.ಕೃಷ್ಣಪ್ಪ (ಈಗ ನಿಧನರಾಗಿರುವ) ಕಣದಲ್ಲಿದ್ದಾರೆ.
ಅಭ್ಯರ್ಥಿಗಳ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ. ಮುದ್ದಹನುಮೇಗೌಡ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಇವರೊಂದಿಗೆ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್, ಚೌದ್ರಿ ಟಿ. ರಂಗಪ್ಪ, ಮಸಾಲಾ ಜಯರಾಂ ಇದ್ದರು. ಬಿಜೆಪಿ ವತಿಯಿಂದ ಪಕ್ಷದ ಅಭ್ಯರ್ಥಿ ಜಿ. ಎಸ್. ಬಸವರಾಜು ಸಹ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಇವರೊಂದಿಗೆ ತಾಲೂಕು ಅಧ್ಯಕ್ಷ ಅರಳೀಕೆರೆ ರವಿಕುಮಾರ್, ಮಾಜಿ ಅಧ್ಯಕ್ಷ ಟಿ.ಎಸ್.ಬೋರೇಗೌಡ ಹಾಗೂ ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಹೆಬ್ಬಾಕ ರವಿ, ವಾಲೆ ಚಂದ್ರು, ಗುಬ್ಬಿಯ ಬೆಟ್ಟಸ್ವಾಮಿ, ಪಂಚಾಕ್ಷರಿ ಇತರರು ಇದ್ದರು.
ಜೆಡಿಎಸ್‌ನಿಂದಲೂ ಮತಯಾಚನೆ: ಚುನಾವಣೆ ಬಳಿಕ ನಿಧನರಾಗಿರುವ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪನವರ ಪರವಾಗಿಯೂ ಪ್ರಚಾರ ನಡೆಸಲಾಗುತ್ತಿದೆ. ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಶಾಸಕ ಸುರೇಶ್ ಬಾಬು, ಡಾ.ಹುಲಿನಾಯ್ಕರ್ ಎ.ಕೃಷ್ಣಪ್ಪಪರ ಮತ ಯಾಚಿಸಿದರು.