ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಮದೇವ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Mainashree
Updated On : 29 Apr 2014, 12:21 pm

ಕ.ಪ್ರ. ವಾರ್ತೆ ್ಣ ತುಮಕೂರು ್ಣ ಏ. 28
ರಾಹುಲ್‌ಗಾಂಧಿಯವರನ್ನು ಟೀಕಿಸುವ ನೆಪದಲ್ಲಿ ದಲಿತರ ಚಾರಿತ್ರ್ಯ ವಧೆ ಮಾಡಿರುವ ಯೋಗ ಗುರು ರಾಮದೇವ್ ಹೇಳಿಕೆ ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಬಿಜೆಪಿ ನಾಯಕರ ಕ್ರಮವನ್ನು ಖಂಡಿಸಿ ತುಮಕೂರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟಜಾತಿ ವಿಭಾಗದಿಂದ ಪ್ರತಿಭಟನೆ ನಡೆಸಲಾಯಿತು.
 ರಾಜಕೀಯ ಟೀಕೆ ಮಾಡುವ ಸಂದರ್ಭದಲ್ಲಿ ರಾಹುಲ್ ದಲಿತರ ಕೇರಿಗಳಿಗೆ ಹೋಗುವುದು ಹನಿಮೂನ್ ಮಾಡಿಕೊಳ್ಳಲು ಎಂದು ಹೇಳುವ ಮೂಲಕ ರಾಮದೇವ್ ಈ ದೇಶದ ಮೂಲನಿವಾಸಿಗಳ ಚಾರಿತ್ರ್ಯವಧೆ ಮಾಡಿದ್ದಾರೆ.   ಈ ಘಟನೆ ನಡೆದು 24 ಗಂಟೆ ಕಳೆದರೂ ಬಿಜೆಪಿಯ ಯಾವೊಬ್ಬ ಹಿರಿಯ ನಾಯಕರು ರಾಮದೇವ್ ಹೇಳಿಕೆ ಖಂಡಿಸದೆ ಇರುವುದನ್ನು ನೋಡಿದರೆ ಇದರ ಹಿಂದೆ ಬಿಜೆಪಿ ಮುಖಂಡರ ಕೈವಾಡವಿರುವುದು ಸ್ಪಷ್ಟವಾಗುತ್ತದೆ. ಶತ ಶತಮಾನಗಳಿಂದ ನೋವು ಉಂಡು ಬೇರೆಯವರ ಸುಖಕ್ಕೆ ದುಡಿಯುತ್ತಿರುವ ಇಂತಹ ಸಮುದಾಯವನ್ನು ಅನೈತಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತದೆ ಎಂಬಂತೆ ಮಾತನಾಡಿರುವ ರಾಮದೇವ್ ಅವರನ್ನು ಕೂಡಲೇ ಗಡಿಪಾರು ಮಾಡಿ ದಲಿತರ ಚಾರಿತ್ರ್ಯ ಎತ್ತಿ ಹಿಡಿಯುವಂತೆ ಒತ್ತಾಯಿಸಿದ್ದಾರೆ.
 ದಲಿತರು ಎಂದಿಗೂ ಮೈಮಾರಿಕೊಂಡು ಜೀವನ ನಡೆಸುವವರಲ್ಲ. ಅವರ ತಮ್ಮ ಶ್ರಮವನ್ನು ಒತ್ತೆಯಿಟ್ಟು ಬದುಕು ನಡೆಸಿದವರು. ಇಂತಹ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರಾಮದೇವ್ ಹೇಳಿಕೆ ವೈಯುಕ್ತಿಕ ಎಂಬುದಾದರೆ ಇದುವರೆಗೂ ಏಕೆ ಬಿಜೆಪಿಯ ಯಾವ ನಾಯಕರೂ ಹೇಳಿಕೆ ಖಂಡಿಸಿಲ್ಲವೆಂದು ಪ್ರಶ್ನಿಸಿದರು.ದಲಿತ ವಿರೋಧಿ ಬಿಜೆಪಿಯನ್ನು ದಲಿತರು ಬೆಂಬಲಿಸಬೇಕೇ. ಇಂತಹ ದಲಿತ ವಿರೋಧಿ ಪಕ್ಷಕ್ಕೆ ಎಲ್ಲ ಶೋಷಿತ ಸಮುದಾಯಗಳು ಸೇರಿ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದಿದ್ದಾರೆ.  ಗ್ರಾಮ ವಾಸ್ತವ್ಯ ಇಂದು ನಿನ್ನೆಯ ಕಲ್ಪನೆಯಲ್ಲ. ರಾಜಮಹಾರಾಜರು ಸಹ ತಮ್ಮ ಆಳ್ವಿಕೆಯಲ್ಲಿ ಸಾಧಕ-ಭಾದಕಗಳನ್ನು ತಿಳಿದುಕೊಳ್ಳಲು ಮಾರುವೇಷಗಳಲ್ಲಿ ಶ್ರಮಿಕ ವರ್ಗದ ಕೇರಿಗಳಲ್ಲಿ ಸಂಚರಿಸಿ ಅವರ ಕಷ್ಟ ಕಾರ್ಪಣ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಆ ಕೆಲಸವನ್ನು ಇಂದು ರಾಹುಲ್‌ಗಾಂಧಿ ಸೇರಿದಂತೆ ಕೆಲ ರಾಜಕಾರಣಿಗಳು ಅಳವಡಿಸಿಕೊಂಡು ದಲಿತರ ಕೇರಿಗಳಿಗೆ ಭೇಟಿ ನೀಡುವ ಮೂಲಕ ಅವರಲ್ಲಿ ಒಂದಿಷ್ಟು ಆಶಾಭಾವನೆಯನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement