ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವೈಭವದ ಬಸವೇಶ್ವರ ಸ್ವಾಮಿ ರಥೋತ್ಸವ

Mainashree
Updated On : 29 Apr 2014, 12:21 pm

ಹುಳಿಯಾರು: ಹೋಬಳಿ ತೊರೆಸೂರಗೊಂಡನಹಳ್ಳಿಯ ಬಸವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಅಸಂಖ್ಯಾ ಭಕ್ತಾಧಿಗಳ ಹರ್ಷೋದ್ಘಾರದಲ್ಲಿ ಸೋಮವಾರ ಮಧ್ಯಾಹ್ನ ವೈಭವಯುತವಾಗಿ ಜರುಗಿತು.
 ಸೋಮವಾರ ಬೆಳಿಗ್ಗೆ ಸ್ವಾಮಿಯವರ ಮೂಲ ಸ್ಥಾನಕ್ಕೆ ದರ್ಬಾರ್ ಅಲಂಕಾರ ಮಾಡಲಾಗಿತ್ತು. ಹೊಳೆಸೇವೆ ಹಾಗೂ ಅಗ್ನಿಕೊಂಡ ನಡೆಸಲಾಯಿತು.ರಥೋತ್ಸವದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಗಳು ನಡೆದು  ಮಧ್ಯಾಹ್ನ 11.30ರಲ್ಲಿ ಸಕಲ ವಾದ್ಯಗಳ ಸಮೇತ ಬಸವೇಶ್ವರ ಸ್ವಾಮಿಯನ್ನು ಚೌಡಮ್ಮ ಸಮ್ಮುಖದಲ್ಲಿ ಕರೆತಂದು ಅಲಂಕೃತ ರಥದಲ್ಲಿ ಕುಳ್ಳಿರಿಸಿ ಭಕ್ತಾಧಿಗಳು ಜಯಕಾರ ಹಾಕುವ ಮೂಲಕ ರಥ ಎಳೆದು ತಮ್ಮ ಭಕ್ತಿ ಅರ್ಪಿಸಿದರು.
  ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಂತರ ವೀರಗಾಸೆ ನೃತ್ಯದೊಂದಿಗೆ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
29 ಮಂಗಳವಾರ ಚೌಡೇಶ್ವರಿದೇವಿಯ ಹೊಳೆಸೇವೆ, ನಡೆಮುಡಿಯೊಂದಿಗೆ ಕಳಸೋತ್ಸವ, ಆರತಿಬಾನವಿದ್ದು  ಸಂಜೆ ದೇವಿಯನ್ನು ಪುಷ್ಪಾಲಂಕೃತ ವಾಹನದಲ್ಲಿ ಕುಳ್ಳಿರಿಸಿ ಉತ್ಸವ ಹಾಗೂ ತುಮಕೂರಿನ ಜ್ಯೋತಿ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. 30 ಬುಧವಾರ ಸಂಜೆ ಓಕಳಿಸೇವೆ ಹಾಗೂ ಕಂಕಣ ವಿಸರ್ಜನಾ ಕಾರ್ಯ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement