ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವ್ಯಕ್ತಿಯ ಭಾವನೆಗಳ ಪ್ರದರ್ಶನ ರಂಗಭೂಮಿ

Mainashree
Updated On : 29 Apr 2014, 12:20 pm

ಮಧುಗಿರಿ:  ವ್ಯಕ್ತಿಯ  ಭಾವನೆಗಳ  ಪ್ರದರ್ಶನ ರಂಗಭೂಮಿ  ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.
ಮಧುಗಿರಿಯಲ್ಲಿ ಕಲಾರಂಗದ ಆಶ್ರಯದಲ್ಲಿ ಪ.ವಿ.ಸುಬ್ರಹ್ಮಣ್ಯ  ವಿರಚಿತ ಕರ್ಣ ನಾಟಕದ ಪ್ರಥಮ ಪ್ರದರ್ಶನವನ್ನು ತಬಲ ನುಡಿಸುವ ಮೂಲಕ ಉದ್ಘಾಟಿಸಿದರು.
 ಪೌರಾಣಿಕ ನಾಟಕಗಳು ಈ ನೆಲದ ಬೇರುಗಳು. ನಾಟಕದ ವಸ್ತು ಸತ್ವಯುತವಾಗಿದ್ದು ಪ್ರದರ್ಶನ ನಟರ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಬೇರೆ ಮಾಧ್ಯಮಗಳಿಗಿಂತ ಹೆಚ್ಚು ಪರಿಣಾಮ ಬೀರುವ ಶಕ್ತಿ ಸಾಮರ್ಥ್ಯ ನಾಟಕಗಳಿಗವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ಪ.ವಿ.ಸುಬ್ರಹ್ಮಣ್ಯ ವಿರಚಿತ ಪ್ರಥಮ ಪೌರಾಣಿಕ ನಾಟಕ ಪ್ರದರ್ಶನ ಅದ್ಧೂರಿಯಾಗಿ  ಏರ್ಪಟಾಗಿದ್ದು ಈ ನಾಟಕ ನಾಡಿನಾದ್ಯಂತ ಪ್ರದರ್ಶನ ಕಾಣುವಂತಾಗಲಿ ಎಂದು ಶುಭ ಹಾರೈಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾ. ಮಹಾಲಿಂಗೇಶ್ ರಂಗಕಲೆ ದೇಶದ ಆಸ್ತಿ ಎಂದರು. ನಾಟಕದ ಕತೃ ಪ.ವಿ. ಸುಬ್ರಹ್ಮಣ್ಯ, ಪತ್ರಕರ್ತ ಬಂಡಿ ಚೌಡಯ್ಯ ಇದ್ದರು. ದ್ರೇಹಚಾರ್  ಸ್ವಾಗತಿಸಿ ರಾಮಕೃಷ್ಣ ನಿರೂಪಿಸಿ ಎಂ.ಎನ.ನರಸಿಂಹಮೂರ್ತಿ ವಂದಿಸಿದರು.                                                                    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement