ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮದ್ಯ ವ್ಯಸನಿ ಸಮಾಜಕ್ಕೆ ಮಾರಕ

Mainashree
Updated On : 29 Apr 2014, 11:38 am

ಪಾವಗಡ: ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಈ ನಿಟ್ಟಿನಲ್ಲಿ   ಮದ್ಯಪಾನ ಮುಕ್ತರಾಗಿ ಸುಖ ಸಂಸಾರ ನೆಡೆಸಿ ಎಂದು ಶಿಬಿರಾರ್ಥಿ ಮುಖಂಡ ನರಸಿಂಹಮೂರ್ತಿ ಕಿವಿಮಾತು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಮಂಗಳವಾರ ಪಟ್ಟಣದ ಗುರುಭವನದಲ್ಲಿ ಏರ್ಪಡಿಸಿದ್ದ ಮದ್ಯ ವರ್ಜನ ಶಿಬಿರ ಸಮರೋಪದಲ್ಲಿ ಅವರು ಮಾತನಾಡಿದರು.
ಮದ್ಯ ಸೇವನೆಯಿಂದ ಆರೋಗ್ಯ ಹಾನಿಕರ ವಾಗುವುದಲ್ಲದೇ ಮದ್ಯ ವ್ಯಸನಿಗಳನ್ನು ಸಮಾಜ ತಿರಸ್ಕಾರ ಮಾಡುತ್ತದೆ. ಕುಟುಂಬ ಹಾಗೂ ಸಮಾಜದಲ್ಲಿ ಅವರಿಗೆ ಸ್ಥಾನ ಮಾನ ಹಾಗೂ ಸೂಕ್ತ ಗೌರವಗಳು ದೊರೆಯುವುದಿಲ್ಲ. ಮದ್ಯ ಮುಕ್ತರಾಗಿ ಗೌರವಯುತ ಬದುಕು ಸಾಗಿಸುವ ಮೂಲಕ ಸುಖ ಸಂಸಾರ ನಡೆಸಿ ಎಂದು ಮದ್ಯ ವೆಸನಿಗಳಿಗೆ ಸಲಹೆ ನೀಡಿದರು.
ಶ್ರೀಮಂತನಾದ ನಾನು ಸ್ನೇಹಿತರ ಒತ್ತಾಯಕ್ಕೆ ಮಣಿದು ಮದ್ಯ ಸೇವನೆ ಚಟಕ್ಕೆ ಬಲಿಯಾಗಿ ಕಳೆದ 20ವರ್ಷಗಳಿಂದ ಮದ್ಯ ವ್ಯಸನಿಯಾಗಿ, ಹಣದ ಜೊತೆಗೆ, ಶಾಂತಿ-ನೆಮ್ಮದಿ ಹಾಳು ಮಾಡಿಕೊಂಡಿದೆ. ನಿರಂತರ ಮದ್ಯೆ ಸೇವನೆಯಿಂದ ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ದೇವರ ದಯೆಯಿಂದ
ಬದುಕುಳಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸಂಘಟಿತರ ಸಲಹೆ ಪಡೆದು ಮದ್ಯೆ ತ್ಯಜಿಸಿದ ಕಾರಣ  ಧರ್ಮಸ್ಥಳ ಮಂಜುನಾಥ ಸ್ವಾಮಿ ಕೃಪೆಯಿಂದ ಕಳೆದ 3 ತಿಂಗಳಿಂದ ನನ್ನ ಆರೋಗ್ಯ ಉತ್ತವಾಗಿದ್ದು, ಬದುಕಿರುವವರಿವಿಗೂ ಮಂಜುನಾಥ ಸ್ವಾಮಿ  ಸೇವೆಯಲ್ಲಿ ನಿರತರಾಗಿರುವುದಾಗಿ ಅವರು ತಿಳಿಸಿದರು.
ಜನ ಜಾಗೃತಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮದ್ಯ ವರ್ಜನ ಶಿಬಿರದಲ್ಲಿ ತಾಲೂಕಿನ 58ಮಂದಿ ಮದ್ಯ ವ್ಯಸನಿಗಳು ಭಾಗವಹಿಸಿದ್ದು ಯೋಗಾಸನ ಸೇರಿದಂತೆ 10ದಿನಗಳ ಶಿಬಿರದಲ್ಲಿ ಆನೇಕ ವಿಚಾರಗಳು ಪಡೆದು ಮದ್ಯ ಮುಕ್ತರಾಗಿವುದು ಸಂತೋಷಕರ ವಿಚಾರ ಎಂದು ಅಭಿಪ್ರಾಯಪಟ್ಟರು.
ಸಮಿತಿಯ ಪ್ರಾದೇಶಿಕ ನಿರ್ದೇಶಕ ರಾಜಣ್ಣ, ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ಪಿ.ಕೆ.ಪುರತೋತ್ತಮ್ ಪಾವಗಡ ವಿಜಯಕುಮಾರ್, ರಾಜಣ್ಣ ಮತ್ತಿತರರು ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿ ಸತೀಶ್‌ನಾಯ್ಕ್, ತಾಪಂ ಮಾಜಿ ಅಧ್ಯಕ್ಷೆ ವಿನೋದಾ ರಾಮಾಂಜಿನಪ್ಪ, ಸದಸ್ಯರಾದ ಮಂಜುನಾಥ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement