ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾರ್ಷಿಕೋತ್ಸವ ಪಾಲ್ಗೊಳ್ಳುವವರ ಪ್ರತಿಭೆ ಗುರ್ತಿಸುವ ವೇದಿಕೆಗಳಾಗಲಿ

Mainashree
Updated On : 1 May 2014, 12:22 pm

ಚಿಕ್ಕನಾಯಕನಹಳ್ಳಿ: ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭಗಳು ಪಾಲ್ಗೊಳ್ಳುವವರ ಪ್ರತಿಭೆಯನ್ನು ಗುರುತಿಸುವ ವೇದಿಕೆಗಳಾಗಬೇಕು ಎಂದು ಬೆಂಗಳೂರಿನ ಮಹಾರಾಣಿ ಕಾಲೇಜಿನ ಸಹಪ್ರಾಧ್ಯಾಪಕ ರಾಮಲಿಂಗಪ್ಪ.ಟಿ.ಬೇಗೂರು ನುಡಿದರು.
 ಅವರು ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ  ಚಟುವಟಿಕೆಗಳ ಸಮಾರೋಪ ಭಾಷಣದಲ್ಲಿ ಮಾತನಾಡುತ್ತಿದ್ದರು. ಪಟ್ಟಣದಲ್ಲಿ ನವೋದಯ ಕಾಲೇಜು ಪ್ರಭುದ್ಧ ವಿಚಾರ ಸಂಕಿರಣಗಳ ವೇದಿಕೆಯಾಗಿ ರೂಪುಗೊಂಡಿದೆ. ಕಲೆ, ಸಾಹಿತ್ಯ, ಆರ್ಥಿಕ, ಜಾನಪದ ವಿಚಾರಗಳನ್ನಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು, ವಿದ್ಯಾರ್ಥಿಗಳ  ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ಇಲ್ಲಿಯ ಶಿಕ್ಷಣ ವ್ಯವಸ್ಥೆ ಉದ್ಯೋಗ, ಪ್ರತಿಭೆ, ಜೀವನ ರೂಪಿಸಿಕೊಳ್ಳುವದಕ್ಕೆ ಕಾರಣವಾಗುತ್ತದೆ. ಇಂದು ಪ್ರಪಂಚ ತಂತ್ರಜ್ಞಾನ ಮಯವಾಗಿದೆ. ಶಿಕ್ಷಣವು ಸಹ ಇಂದು ಇದರಿಂದ ಹೊರತಾಗಿಲ್ಲ. ಮುಂಚೆ ಕ್ರೀಡೆ ದೇಶಾಭಿಮಾನದ ಸಂಕೇತವಾಗಿತ್ತು. ಸ್ಪರ್ಧೆಯಲ್ಲಿ ಸೋತ ದೇಶ ಯುದ್ಧದಲ್ಲಿ ಸೋತ ಭಾವನೆ ಹೊಂದುತ್ತಿತ್ತು. ಆದರೆ  ಕ್ರೀಡಾಲೋಕದಲ್ಲಿಂದು ರಂಜನೆ ಎಂಬ ಭ್ರಮೆ ಆವರಿಸಿಕೊಂಡಿದೆ. ಕ್ರೀಡಾ  ಪಟುಗಳುಗಳು ಮಾರಾಟದ ಸರಕುಗಳಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ  ಭವಿಷ್ಯದ ಬದುಕಿನ ಬಗ್ಗೆ ಗುರಿಯಿರಲಿ ಎಂದರು.
ಅಂತಿಮವಾಗಿ ನಿಮ್ಮ ಸ್ವಸಾರ್ಮರ್ಥ್ಯವೇ ನಿಮ್ಮ ಬದುಕನ್ನು ರೂಪಿಸುವುದು. ಒಬ್ಬೊಬ್ಬನಲ್ಲಿ ಒಂದೊಂದು ಸಾಮರ್ಥ್ಯವಿರುತ್ತದೆ. ಸೋಲಿಗೆ ಅಂಜಬೇಡಿ, ಅದರ ಹಿಂದೆ ಗೆಲವಿರುತ್ತದೆ ಎಂದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್, ತುಮಕೂರು ವಿವಿಯ ಡಾ. ಡಿ.ವಿ.ಗುಂಡಪ್ಪ, ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ನಿತ್ಯಾನಂದಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಬಿ.ಎಸ್. ಬಸವಲಿಂಗಪ್ಪ ಮುಂತಾದವರಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement