ಕಾರ್ಯದರ್ಶಿಗೆ ಬೀಳ್ಕೊಡುಗೆ
ಹುಳಿಯಾರು: ಜಿಲ್ಲೆಯಲ್ಲಿ ಹುಳಿಯಾರು ಎಪಿಎಂಸಿ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದ್ದು ಇದರ ಮುನ್ನೆಡೆಗೆ ಮಾರುಕಟ್ಟೆ ಕಾರ್ಯದರ್ಶಿಯಾಗಿದ್ದ ಜಯರಾಂ ಅವರ ಪರಿಶ್ರಮವೂ ಕಾರಣವಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಳ್ಳಿ ರಾಜ್ಕುಮಾರ್ ಶ್ಲಾಘಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆರೂವರೆ ವರ್ಷಗಳ ಕಾಲ ಕಾರ್ಯದರ್ಶಿಯಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿ, ತುಮಕೂರು ಎಪಿಎಂಸಿಗೆ ಜಯರಾಂ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರ ಎಪಿಎಂಸಿ ಕಾರ್ಯಕಾರಿ ಮಂಡಳಿ ಹಾಗೂ ವರ್ತಕಸಂಘದವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಪಿಎಂಸಿ ಅಧ್ಯಕ್ಷ ಬಿ. ಸಣ್ಣಯ್ಯ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಕಾರ್ಯದರ್ಶಿ ಜಯರಾಂ ಮಾತನಾಡಿ, ಕಾರ್ಯಕಾರಿ ಮಂಡಳಿ, ಶಾಸಕರು, ವರ್ತಕರ ಸಹಕಾರದಿಂದಾಗಿ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯವಾಯಿತು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ವೈ.ಸಿ. ಸಿದ್ರಾಮಯ್ಯ, ಮಾಜಿ ಅಧ್ಯಕ್ಷ ಶಿವರಾಜ್, ನಿರ್ದೇಶಕ ಸಣ್ಣಕರಿಯಪ್ಪ, ರುದ್ರೇಶ್, ಸೋಮಶೇಖರಯ್ಯ, ಬಸವರಾಜು, ಈಶ್ವರಮೂರ್ತಿ, ವರ್ತಕರ ಸಂಘದ ಶಾಂತಣ್ಣ ಇದ್ದರು.