ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಚಿವರಿಂದ ನಿರ್ಲಕ್ಷ್ಯ ಧೋರಣೆ'

Rashmi Kasaragodu
Updated On : 5 Aug 2014, 12:18 pm

ಕುಣಿಗಲ್: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರ ಮಲತಾಯಿ ಧೋರಣೆಯಿಂದಾಗಿ ತಾಲೂಕಿಗೆ ಹರಿಯ ಬೇಕಾದ ಹೇಮಾವತಿ ನೀರು ಶಿರಾ ತಾಲೂಕಿಗೆ ಹರಿಯುತ್ತಿದೆ ಎಂದು ರೈತಸಂಘ ಮತ್ತು ಹಸಿರುಸೇನೆ ತಾಲೂಕು ಗೌರವಾಧ್ಯಕ್ಷ ಕಪಿನಿಪಾಳ್ಯ ರಮೇಶ್ ಆರೋಪಿಸಿದರು.
ಸೋಮವಾರ ಸಂಘದ ಕಚೇರಿಯಲ್ಲಿ ತಾಲೂಕಿಗೆ ಹೇಮಾವತಿ ನೀರುಹರಿಯುವ ನಾಲೆಯ 120ನೇ ಕಿಮಿನಿಂದ 186ನೇ ಕಿಮಿ ವರೆಗಿನ ವಾಸ್ತಾವಾಂಶಗಳನ್ನು ಪ್ರದರ್ಶಿಸಿ ಮಾತನಾಡಿ, ಹೇಮಾವತಿ ನಾಲಾವಲಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ತುಮಕೂರು ಜಿಲ್ಲೆಯ ಕೆಲಭಾಗ ಹಾಗೂ ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಹರಿಸುವ ನಾಲೆ ಬಲಹೀನವಾಗಿದೆ. ನೀರು ಹರಿಸಿದಲ್ಲಿ ನಾಲೆ ಒಡೆದು ನೀರು ಪೋಲಾಗಲಿದೆ ಎಂದರು.
127ನೇ ಕಿಮಿಯಲ್ಲಿ ಲೈನಿಂಗ್ ಕುಸಿದಿದೆ. ಕೆಲೆವೆಡೆ ಹೂಳು ತೆಗೆಯಲು ಯಂತ್ರ ಬಳಸಿದ್ದರಿಂದ ಸಿಮೆಂಟ್‌ಲೈನಿಂಗ್ ಹಾಳಾಗಿದೆ, 130-137ಕಿಮಿಯಲ್ಲಿ ಮೇಳೆ ಕೋಟೆ ಸೇರಿದಂತೆ ಇತರೆ ಪ್ರದೇಶದ ಕೊಳಚೆ ನೀರು ಸಂಗ್ರಹವಾಗಿದೆ. ಬೇಸಿಗೆಯಲ್ಲಿ ನಾಲೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಹರಿಸಲು ಸಮಸ್ಯೆ ಎದುರಾಗಲಿದೆ. ಸಂಸದರು, ಕುಣಿಗಲ್ ಶಾಸಕರು ಈ ಸಂಬಂಧ ಪ್ರಯತ್ನ ನಡೆಸಬೇಕಿದೆ ಎಂದರು. ಇನ್ನೊಂದು ವಾರದೊಳಗೆ ತಾಲೂಕಿಗೆ ಹೇಮೆ ನೀರು ಹರಿಯದಿದ್ದಲ್ಲಿ, ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಕುಣಿಗಲ್‌ನಿಂದ ತುಮಕೂರಿನ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ನಡೆಸಿ ಮಾರ್ಗದಲ್ಲಿ ಬರುವ ಹೆಬ್ಬೂರು, ನಾಗವಲ್ಲಿ ನಾಲಾವಲಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ತಾಲೂಕು ಅಧ್ಯಕ್ಷ ಮಾವಿನಕಟ್ಟೆ ರಮೇಶ, ತರೇದಕುಪ್ಪೆರಾಜು, ಪ್ರಸನ್ನ, ನವೀನ, ಕೃಷ್ಣಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement