ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ನೇಹ, ಸೌಹಾರ್ದ, ಸಹಬಾಳ್ವೆಗೆ ಕ್ರೀಡೆ ದಾರಿದೀಪ

Rashmi Kasaragodu
Updated On : 5 Aug 2014, 12:22 pm

ಮಧುಗಿರಿ: ವಿದ್ಯಾರ್ಥಿಗಳು ಶಿಕ್ಷಣ ಕಲಿಯುವ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಿ ತಮ್ಮಲ್ಲಿ ಅಡಗಿರುವ ಪ್ರತಿಭೆ ಹೊರ ಸೂಸಿ ಉತ್ತಮ ಕ್ರೀಡಾಪಟುಗಳಾಗಿ ಬೆಳೆದು ನಮ್ಮ ದೇಶಕ್ಕೆ ಕೀರ್ತಿ ತರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್. ರಾಮಕೃಷ್ಣಯ್ಯ ಕರೆ ನೀಡಿದರು.
ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ವತಿಯಿಂದ ಏರ್ಪಡಿಸಿದ್ದ 2014-15ನೇ ಸಾಲಿನ ಕಸಬಾ ಹೋಬಳಿ ಗ್ರಾಮಾಂತರ ಮಟ್ಟದ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸು, ದೇಹ ಲವಲವಿಕೆಯಿಂದ ಕೂಡಿರುತ್ತದೆಯಲ್ಲದೆ ದೈಹಿಕ-ಮಾನಸಿಕವಾಗಿ ಸದೃಡರಾಗಿ ಆರೋಗ್ಯ ಚನ್ನಾಗಿರುತ್ತದೆ. ಸೋಲು ಗೆಲವನ್ನು ಸಮಾನಾಗಿ ಸ್ವೀಕರಿಸಿ ಪ್ರೀತಿ, ಸ್ನೇಹ, ಸೌಹಾರ್ದ ಸಹಬಾಳ್ವೆಗೆ ಕ್ರೀಡೆ ದಾರಿದೀಪ ಎಂದರು. ಶಿಕ್ಷಕ ಎಸ್.ಎಂ.ಹನುಮಂತರಾಯಪ್ಪ, ನಾಗಭೂಷಣ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement