ಸರ್ಕಾರಿ ಆದೇಶಕ್ಕೆ ಅಭಿನಂದನೆ
ತುಮಕೂರು: 8 ವರ್ಷ ಸೇವೆ ಪೂರೈಸಿದ ಸರ್ಕಾರಿ ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಕಾಲಬದ್ಧ ಮುಂಬಡ್ತಿ ಹಾಗೂ ವೇತನ ಶ್ರೇಣಿ ನೀಡಲು ಸರ್ಕಾರ ಆದೇಶ ನೀಡಿರುವುದಕ್ಕೆ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಅಭಿನಂದಿಸಿದೆ. ಇದಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠಗೌಡರ ಹೋರಾಟ ಕಾರಣ ಪ್ರಕಟಣೆಯಲ್ಲಿ ತಿಳಿಸಲಾಗಿದೆ.