ತುಮಕೂರು

ಕುಣಿಗಲ್ ಪುರಸಭೆ ಬಜೆಟ್ ಮಂಡನೆ

ಕುಣಿಗಲ್: ಪ್ರತಿಭಟನೆ ನಡುವೆಯೇ ಪುರಸಭೆಯ 2014-15 ಸಾಲಿನ ಬಜೆಟ್ ಸಭೆ ನಡೆಯಿತು.
ಪುರಸಭಾಧ್ಯಕ್ಷ ಕೆ.ಎಲ್. ಹರೀಶ್ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಗ್ಗೆ 11ಗಂಟೆಗೆ ಬಜೆಟ್ ಮಂಡನೆ ಸಭೆ ಪ್ರಾರಂಭವಾಗಬೇಕಿದ್ದು, 12ನೇ ವಾರ್ಡ್ ನಾಗರಿಕರ ಧರಣಿ, ಕಚೇರಿಗೆ ನುಗ್ಗುವ ಯತ್ನದಿಂದಾಗಿ ಸಂಜೆ ನಾಲ್ಕುವರೆಗೆ ಬಟೆಟ್ ಸಭೆ ಆರಂಭಗೊಂಡಿತು. ಸಭೆಯಲ್ಲಿ 2014-15ನೇ ಸಾಲಿಗೆ ರು. 33.68 ಕೋಟಿ ನಿರೀಕ್ಷಿಕ ಅದಾಯದಲ್ಲಿ ರು. 33.40 ಕೋಟಿ ವೆಚ್ಚ ಮಾಡಿ, ರು. 28ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು. ಬಜೆಟ್ ಮೇಲಿನ ಚರ್ಚೆ ಪ್ರಾರಂಭದಲೇ ಸದಸ್ಯ ಅರುಣಕುಮಾರ್, ರಂಗಸ್ವಾಮಿ, ಪಟ್ಟಣದ ಕುವೆಂಪುನಗರದ ಸರ್ವೆ ನಂಬರ್ ನಿವೇಶನದ ಭೂ ಪರಿವರ್ತನೆಯಲ್ಲಿ ಪುರಸಭೆ ಅಧಿಕಾರಿಗಳು ಪುರಸಭೆಗೆ ರು. 9 ಲಕ್ಷ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಜೊತೆಗೆ ಪಟ್ಟಣದ ನಾನಾಕಡೆ ಕಂದಾಯ ಭೂಮಿಗೆ ಕಡಿಮೆ ದರ ಕಟ್ಟಿಸಿಕೊಂಡು ಅಧಿಕಾರಿಗಳು ಪುರಸಭೆಗೆ ಬರಬೇಕಾದ ಕೋಟ್ಯಂತರ ರು. ಆದಾಯಲೂಟಿ ಮಾಡಿದ್ದು, ಸಮಗ್ರ ತನಿಖೆ ನಂತರ ಪುರಸಭೆಗೆ ಬರಬೇಕಾದ ಹಣ ವಸೂಲು ಮಾಡಿಬೇಕೆಂದು ಪಟ್ಟು ಹಿಡಿದರು.
ಅಧ್ಯಕ್ಷ ಕೆ.ಎಲ್.ಹರೀಶ್, ಈ ಬಗ್ಗೆ ವಿಶೇಷ ಸಭೆ ಕರೆದು ಪುರಸಭೆ ಆದಾಯ ಖೋತಾ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳೊಣ, ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿ, ಘನತ್ಯಾಜ್ಯ ವಿಲೆವಾರಿ ಘಟಕಕ್ಕಾಗಿ ರು. 327ಲಕ್ಷ, ನೀರು ಸರಬರಾಜಿಗೆ 60 ಲಕ್ಷ, ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 1106 ಲಕ್ಷ, ಪಟ್ಟಣದ ಹಳೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ರು. 500ಲಕ್ಷ, ಬಸ್ ನಿಲ್ದಾಣಕ್ಕೆ ರು. 200 ಲಕ್ಷ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸೂಕ್ತ ಯೋಜನೆ ರೂಪಿಸಲಾಗಿದೆ ಎಂದರು. ಮುಖ್ಯಾಧಿಕಾರಿ ಅನ್ನದಾನಿ, ಸಿಬ್ಬಂದಿ ರಮೇಶ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT