ಕೊರಟಗೆರೆ: ತಾಲೂಕು ಕಚೇರಿಗೆ ಬರುವ ಗ್ರಾಮೀಣ ಜನತೆಗೆ ಉತ್ತಮ ಸೇವೆ ಕಲ್ಪಿಸುವ ದೃಷ್ಟಿಯಿಂದ ನೌಕರರು ಕಾರ್ಯ ನಿರ್ವಹಸಬೇಕು ಎಂದು ಕೊರಟಗೆರೆ ತಹಸೀಲ್ದಾರ್ ಏಕೇಶ್ ಬಾಬು ತಿಳಿಸಿದರು.
ಕೊರಟಗೆರೆ ತಾಲೂಕಿಗೆ ನೂತನ ತಹಸೀಲ್ದಾರ್ ಆಗಿ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಿಂದ ವರ್ಗಾವಣೆಯಾಗಿ ಪ್ರಭಾರಿಯಾಗಿ ಕಾರ್ಯ ನಿರ್ವಹಸುತ್ತಿದ್ದ ಮಧುಗಿರಿ ತಹಸೀಲ್ದಾರ್ರಿಂದ ಬುಧವಾರ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಬೈಲವೆಂಕಟಪ್ಪ, ಕಂದಾಯ ಆಧಿಕಾರಿಗಳಾದ ನರಸಿಂಹಮೂರ್ತಿ, ಎ.ವಿ. ರಾಜು, ಗುರುಪ್ರಸಾದ್, ಚನ್ನವೀರಯ್ಯ, ರಮೇಶ್ ಇದ್ದರು