ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿವಿ ಬೆಂಗಳೂರು ವತಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಪೋಷಕಾಂಶ ಮತ್ತು ಪೀಡೆ ನಿರ್ವಹಣೆ ಹಾಗೂ ಮೌಲ್ಯವರ್ಧನೆ ಕುರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಮಣ್ಣು ವಿಜ್ಞಾನ ವಿಷಯ ತಜ್ಞೆ ಡಾ. ಬಿ. ಮಮತಾ ಅಡಿಕೆ ಮತ್ತು ಬತ್ತದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ವಿವರಿಸಿದರು. ಡಾ. ಶ್ರೀನಿವಾಸ್ ಭತ್ತದಲ್ಲಿ ಬರುವ ಕೀಟ ಮತ್ತು ರೋಗಗಳ ಲಕ್ಷಣಗಳು ಹಾಗೂ ಅವುಗಳ ಸಮಗ್ರ ಹತೋಟಿ ಬಗ್ಗೆ ವಿವರಿಸಿದರು.
ಡಾ. ರೂಪ. ಬಿ. ಪಾಟೀಲ್ ಟೊಮೇಟೊದಲ್ಲಿ ಕೆಚಪ್ ಹಾಗೂ ರಾಗಿಯ ಮೌಲ್ಯವರ್ಧಿತ ರೊಟ್ಟಿ ತಯಾರಿಸುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿವಿಯ ಡಾ. ವೈ. ಎನ್. ಶಿವಲಿಂಗಯ್ಯ, ಡಾ. ಸುಬ್ಬರಾಯಪ್ಪ, ಕುಣಿಗಲ್ ತಾಲೂಕು ಕೃಷಿ ಅಧಿಕಾರಿ ಹರೀಶ್ ಸೇರಿದಂತೆ ಸುಮಾರು 50 ರೈತರು ಭಾಗವಹಿಸಿದ್ದರು. ಕೃಷಿ ವಿವಿ ವಿದ್ಯಾರ್ಥಿನಿ ಪ್ರೀಯಾರೆಡ್ಡಿ ಸ್ವಾಗತಿಸಿ, ವಂದಿಸಿದರು