ತುಮಕೂರು

ಶಿಕ್ಷಕರಿಗೆ ಆಂಗ್ಲ ಭಾಷೆ ಕಾರ್ಯಾಗಾರ

ತಿಪಟೂರು: ಪಟ್ಟಣದ ಬಿ.ಆರ್.ಸಿ. ಕಚೇರಿಯಲ್ಲಿ ಒಂದು ದಿನದ ಆಂಗ್ಲ ಭಾಷಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಬಿಇಒ ಪ್ರಭುಸ್ವಾಮಿ ಕಾರ್ಯಾಗಾರ ಉದ್ಘಾಟಿಸಿದರು. ತುಮಕೂರು ಉಪ ನಿರ್ದೇಶಕರ ಕಚೇರಿಯ ಆಂಗ್ಲಭಾಷಾ ವಿಷಯ ಪರಿಶೀಲಕರಾದ ರೂಪ 10ನೇ ತರಗತಿಯ ಹೊಸ ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಸಿಸಿಇ ಬಗ್ಗೆ ಆಂಗ್ಲಭಾಷಾ ಶಿಕ್ಷಕರಿಗೆ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಬಿ.ಆರ್.ಸಿ ಕಾಂತರಾಜು ಮತ್ತಿತರರಿದ್ದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಆಂಗ್ಲಭಾಷೆ ಬೋಧಿಸುವ ಶಿಕ್ಷಕರ ಸಂಘಕ್ಕೆ ಕಾರ್ಯಕಾರಿ ಮಂಡಳಿ ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಬಿಇಒ ಬಿ.ಜೆ.ಪ್ರಭುಸ್ವಾಮಿ, ಶಾಶ್ವತ ಸಂಪನ್ಮೂಲ ವ್ಯಕ್ತಿಯಾಗಿ ಆಂಗ್ಲ ಭಾಷಾ ವಿಷಯ ಪರಿಶೀಲಕರಾದ ರೂಪ, ಅಧ್ಯಕ್ಷರಾಗಿ ಮುಖ್ಯ ಶಿಕ್ಷಕಿ ಗೀತಾ, ಉಪಾಧ್ಯಕ್ಷರಾಗಿ ಮುಖ್ಯ ಶಿಕ್ಷಕ ನಾಗರಾಜು, ಬಿ.ಎಸ್.ಮಲ್ಲಿಕಾರ್ಜುನ್, ಕಾರ್ಯದರ್ಶಿಯಾಗಿ ರಂಗಾಪುರ ಪ್ರೌಢಶಾಲೆ ಆಂಗ್ಲಭಾಷಾ ಶಿಕ್ಷಕ ಕೆ.ಎಂ. ಪರಮೇಶ್ವರಯ್ಯ, ಸಹ ಕಾರ್ಯದರ್ಶಿಯಾಗಿ ಸದಾಶಿವಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಖಜಾಂಚಿಯಾಗಿ ಕೆ.ಸಿ. ಕೊಟ್ಟೂರಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ವ್ಯಕ್ತಿತ್ವ ವಿಕಸನಕ್ಕೆ ಅಧ್ಯಾತ್ಮ ಅನಿವಾರ್ಯ
ತುಮಕೂರು: ವ್ಯಕ್ತಿಗಿಂತ ವ್ಯಕ್ತಿತ್ವವೇ ಕಿರೀಟ ಪ್ರಾಯ. ಹಾಗಾಗಿ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಲು ಆಧ್ಯಾತ್ಮ ಅನಿವಾರ್ಯ ಎಂದು ಆರ್ಟ್ ಆಫ್ ಲೀವಿಂಗ್ನ ಗುರುಮಾತೆ ಲಕ್ಷ್ಮೀ ಅಯ್ಯಂಗಾರ್ ಹೇಳಿದರು. ನಗರದ ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ನಡೆದ ನಜೀರ್ ಅಹಮದ್ ಸವಣೂರ ಅವರ ಹರಿದಾಸವಾಣಿ ಸತ್ಸಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯರು ಇಹ-ಪರಗಳೆರಡನ್ನು ಸಮಾನವಾಗಿ ಪ್ರೀತಿಸಿದರು. ಲೌಕಿಕ ಸುಖಕ್ಕಿಂತ ಅಲೌಕಿಕ ಸುಖ ಶಾಶ್ವತವೆಂದು  ಭಾವಿಸಿದರು ಎಂದರು.ಪಂಡಿತ್ ಸವಣೂರರು ವಿಶಿಷ್ಟವಾದ ಹಿಂದೂಸ್ಥಾನಿ ಶೈಲಿಯಲ್ಲಿ ದಾಸ ವರೇಣ್ಯರ ಕೀರ್ತನೆಗಳನ್ನು ಹಾಡಿದರು. ಮನಸೂರೆಗೊಳ್ಳುವ ಅಪೂರ್ವ ರಾಗಗಳಿಂದ ತಾಳ, ಲಯ ಬದ್ಧವಾಗಿ ಹಾಡಿ ಆಸ್ಥಿಕ ವೃಂದವನ್ನು ಹರ್ಷಗೊಳಿಸಿದರು. ಪುರಂದರದಾಸರ, ಮಹೀಪತಿದಾಸರ ಕೀರ್ತನೆಗಳನ್ನು ತನ್ಮಯವಾಗಿ ಹಾಡಿ ಭಕ್ತಿ ಸುಧೆಯನ್ನು ಉಣಿಸಿದರು ಎಂದರು.ವ್ಯಾಖ್ಯಾನಿಸಿದ ದಾಸ ಸಾಹಿತ್ಯ ಸುಧಾಕರ ಡಾ. ಕವಿತಾಕೃಷ್ಣರು ಸೃಷ್ಟಿಯಲ್ಲಿರುವ ಅನಂತ ಜೀವರಾಶಿಗಳಲ್ಲಿ ಮಾನವ ಜನ್ಮವೇ ಕಿರೀಟ ಪ್ರಾಯವಾದದ್ದು. ಮಾನವ ಜ್ಞಾನರಾಧನೆಯಿಂದ ದೇವ ಮಾನವನಾಗಬಲ್ಲ. ಸುಜ್ಞಾನವೇ ಜನನ, ಅಜ್ಞಾನವೇ ಮರಣ, ವ್ಯಕ್ತಿ ವಿಕಸನವಾದರೆ ಸಾಲದು, ವ್ಯಕ್ತಿತ್ವ ವಿಕಸವಾದರೆ ಮಾತ್ರ ಬದುಕಿನಲ್ಲಿ ಶಾಂತಿ, ಸುಖ, ನೆಮ್ಮದಿ ಲಭಿಸಲು ಸಾಧ್ಯ ಎಂದರು.ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ನೈತಿಕ ಶಿಕ್ಷಣದೊಂದಿಗೆ ಆಧ್ಯಾತ್ಮ ಪ್ರೇಮ ಮೂಡಿಸಬೇಕು. ಆಗ ಮಾತ್ರ ಮನೆ ಮನಗಳಲ್ಲಿ ವಿವೇಕಾನಂದ, ರಾಮಕೃಷ್ಣ, ಶಾರದದೇವಿ ಅವರಂತಹ ಮಕ್ಕಳನ್ನು ಕಾಣಲು ಸಾಧ್ಯ ಎಂದರು. ಮಹಿಳಾ ಮಕ್ಕಳ ಸಾಹಿತ್ಯ ಕೂಟದ ಅಧ್ಯಕ್ಷೆ ಕಮಲಾ ಬಡ್ಡಿಹಳ್ಳಿ ಆಶಯ ನುಡಿಗಳನ್ನಾಡಿದರು. ಪಂಡಿತ್ ಸವಣೂರರು ನಿವೃತ್ತಿ ಬದುಕನ್ನು ಸಂಗೀತರಾಧನೆ ಮೂಲಕ ಸಾರ್ಥಕ ಪಡಿಸಿಕೊಂಡಿರುವುದು ಅಭಿನಂದನೀಯ ಎಂದರು.
ಅನಾಥ ಹೆಣ್ಣು ಮಗು ಪತ್ತೆ
ತುಮಕೂರು:  ಜಿಲ್ಲೆಯ ಪಾವಗಡ ಟೌನ್ನಲ್ಲಿ ಅನಾಥ ಹೆಣ್ಣು ಮಗು ಪತ್ತೆಯಾಗಿದೆ ಎಂದು ತುಮಕೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಗಣೇಶ್ ಪ್ರಸಾದ್ ತಿಳಿಸಿದ್ದಾರೆ. ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಮಗುವಿನ ಪೋಷಕರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಸಂಪರ್ಕಿಸಬೇಕಿದ್ದಲ್ಲಿ ಅಧೀಕ್ಷಕರು, ಬಾಲಮಂದಿರ, ಅಮರಜ್ಯೋತಿ ನಗರ, ಕುಣಿಗಲ್ ರಸ್ತೆ, ತುಮಕೂರು ಅಥವಾ ದೂ.ವಾ. 0816-2201006.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT