ತುಮಕೂರು

ಹಿರಿಯರ ಉತ್ಸಾಹಕ್ಕೆ ಕಿರಿಯರ ಪ್ರೋತ್ಸಾಹ

ಚಿಕ್ಕನಾಯಕನಹಳ್ಳಿ:  ಸ್ವಾತಂತ್ರೋತ್ಸವದ ಪ್ರಯುಕ್ತ ಹಿರಿಯರಿಗೆ ನಾಗರಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟವನ್ನು ರೊ-ಸಿ.ಎನ್.ಪ್ರದೀಪ್ ಉದ್ಘಾಟಿಸಿದರು. ನಂತರ ಮಾತನಾಡಿ, ಇಳಿವಯಸ್ಸಿನಲ್ಲಿ ಹಿರಿಯರಲ್ಲಿರುವ ಉತ್ಸಾಹ ನಮ್ಮಂಥ ಯುವಕರನ್ನು ನಾಚಿಸುವಂತಿದೆ. ವೃದ್ದಾಪ್ಯದಲ್ಲಿ ನಾವು ಆರೋಗ್ಯವನ್ನು ಸ್ಥಿರವಾಗಿ ಕಾಪಾಡಿಕೊಳ್ಳಬೇಕೆಂದರೆ ಚಟುವಟಿಕೆಯಿಂದಿರುವುದು ಅಗತ್ಯ. ಈನಿಟ್ಟಿನಲ್ಲಿ ಹಿರಿಯ ನಾಗರಿಕ ವೇದಿಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತೋಷದ ಸಂಗತಿ. ಈ ಕ್ರೀಡಾಕೂಟದಲ್ಲಿ ಹಿರಿಯ ಮನಸ್ಸುಗಳು ಮುದಗೊಳ್ಳುತ್ತವೆ ಎಂದರು. ಸಾಹಿತಿ ಎಂ.ವಿ.ನಾಗರಾಜರಾವ್ ಮಾತನಾಡುತ್ತ, ವಯೋಸಹಜ ದೈಹಿಕ ತೊಂದರೆಗಳಿಗೆ ಕ್ರೀಡೆಯೇ ಮದ್ದು, ಕ್ರೀಡೆಯಿಂದ ಮನಸ್ಸು ಪ್ರಫುಲ್ಲಗೊಳ್ಳುವುದರಿಂದ ದೈಹಿಕ ನೋವುಗಳು ನಗಣ್ಯವಾಗುತ್ತವೆ. ಹೀಗಾಗಿ ಹೆಚ್ಚು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಿದೆ ಎಂದರು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಸರಳ ಕ್ರೀಡೆಗಳನ್ನು ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಹಿರಿಯರು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಸಂಚಾಲಕ ಮಾಧವರಾವ್, ಹಿರಿಯ ವಕೀಲ ಸಿ.ಕೆ. ಸೀತಾರಾಮಯ್ಯ,ಡಾ. ಎಚ್.ಕೆ. ದಾಸ್, ಡಾ. ಪ್ರಶಾಂತಕುಮಾರಶೆಟ್ಟಿ  ಹಾಜರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿ ಅಥವಾ ಖರ್ಗೆ ಅಲ್ಲ; ಪುಟಿನ್ ಜೊತೆಗಿನ ಭೋಜನಕೂಟಕ್ಕೆ ಕಾಂಗ್ರೆಸ್ ನ ಈ ನಾಯಕನಿಗೆ ಮಾತ್ರ ಆಹ್ವಾನ!

ಪಾಕಿಸ್ತಾದ 'ನ್ಯೂಕ್ಲಿಯರ್ ಬಟನ್' ಈಗ ಅಸಿಮ್ ಮುನೀರ್ ಕೈಯಲ್ಲಿ! ಭಾರತದ ವಿರುದ್ಧ ಸೇಡಿಗೆ ಮುಂದಾಗ್ತಾರಾ?

ಪುಟಿನ್ ಜೊತೆ ಪ್ರಯಾಣಿಸಲು ಕರ್ನಾಟಕದಲ್ಲಿ ತಯಾರಾದ Fortuner ಕಾರನ್ನೇ ಆಯ್ಕೆ ಮಾಡಿದ್ದೇಕೆ ಮೋದಿ?: ಜಗತ್ತಿಗೆ ಸಂದೇಶ ಏನು?

ಬಂಗಾಳಿ ಮಾತಾಡೋರನ್ನ ಬಾಂಗ್ಲಾಕ್ಕೆ ಕಳುಹಿಸೋದಾದ್ರೆ, ಹಿಂದಿ-ಉರ್ದು ಭಾಷಿಗರನ್ನು ಪಾಕ್‌ಗೆ ಕಳಿಸಬೇಕು: TMC ಸಂಸದೆ ಆಕ್ರೋಶ

Pan Masala ತಯಾರಕರ ಮೇಲೆ ಸೆಸ್ ವಿಧಿಸುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕರ!

SCROLL FOR NEXT