ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಂಪಿ ಟಿಕೆಟ್ ಸಾಧ್ಯತೆ ದಟ್ಟವಾಗಿದೆ: ಸೊಗಡು ಶಿವಣ್ಣ

Rashmi Kasaragodu
Updated On : 2 Feb 2014, 1:11 am

ತುಮಕೂರು: ಬಿಜೆಪಿಯಲ್ಲಿ ನಾವೆಲ್ಲಾ ಭದ್ರವಾಗಿದ್ದೇವೆ. ನನಗೇ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿಯಿಂದ ಅಮಾನತ್ತಾಗಿದ್ದ ಸಂಸದ ಜಿ.ಎಸ್. ಬಸವರಾಜು ಅವರ ಹೆಸರು ಯಾವ ಕೋರ್ ಕಮಿಟಿಯಲ್ಲೂ ಇಲ್ಲ. ಜಿಎಸ್‌ಬಿ ಗೇ ಟಿಕೆಟ್ ಎಂಬುದೆಲ್ಲಾ ಊಹಾಪೋಹ. ನಂಬಲರ್ಹವಲ್ಲ. ಜಿಎಸ್‌ಬಿ ಸೃಷ್ಟಿಸಿರುವ ಸುಳ್ಳುಗಳಿಂದಾಗಿ ಗೊಂದಲವುಂಟಾಗಿದೆ ಎಂದು ಮಾಜಿ ಸಚಿವ, ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸೊಗಡು ಶಿವಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಜಿಲ್ಲೆಯಲ್ಲಿ ಹೈಟೆಕ್ ಪಶು ಆಸ್ಪತ್ರೆ ಸ್ಥಾಪಿಸುವ ಮೊದಲು,
ರದ್ದಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುತುವರ್ಜಿ ವಹಿಸಲಿ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜಿಗೆ ಅನುಮೋದನೆ ಸಿಕ್ಕಿ, ಈ ವರ್ಷವೇ ಸ್ಥಾಪನೆಯಾಗುವಂತೆ ನೋಡಿಕೊಳ್ಳಲಿ. ಕಾಲು ಬಾಯಿ ರೋಗದಿಂದ ನರಳುತ್ತಿರುವ ಪಶುಗಳಿಗೆ ಚಿಕಿತ್ಸೆಗೆ ಮುಂದಾಗಲಿ. ಸತ್ತಿರುವ ಪಶುಗಳಿಗೆ ನ್ಯಾಯಯುತವಾದ ಪರಿಹಾರ ಒದಗಿಸಲಿ ಎಂದು ಸೊಗಡು ಒತ್ತಾಯಿಸಿದರು.
ತುಮಕೂರಿನಲ್ಲಿ ಯಾಸಿನ್ ಭಟ್ಕಳ್ ಇದ್ದ ಅನ್ನೋದು ಸಾಬೀತಾಗಿದೆ. ಮರಿ ಯಾಸಿನ್ ಭಟ್ಕಳ್‌ಗಳಿರುವ ಸಾಧ್ಯತೆಯಿದೆ. ಅವರನ್ನು ಮೊದಲು ಪತ್ತೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಕಮಿಷನ್ ಏಜೆಂಟ್‌ನಂತೆ ವರ್ತಿಸುತ್ತಿದೆ. ಲಾಬಿಗೆ ಮಣಿಯದೆ ಜನಪರ ನಿರ್ಧಾರಗಳನ್ನು ಕೈಗೊಳ್ಳಲಿ. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಖಚಿತ ಎಂದು ಸೊಗಡು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement