ತಾ. ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಗೀಕುಪ್ಪೆ ಬಸವರಾಜು
ತುರುವೇಕೆರೆ: ತಾಲೂಕು ಕೃಷಿ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಂಗೀಕುಪ್ಪೆ ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಅವರು ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಜೆಡಿಎಸ್ ಬೆಂಬಲಿತ ಸದಸ್ಯರೂ ಆಗಿರುವ ಬಸವರಾಜು ಅವರು ಮಾತ್ರ ಚುನಾವಣೆಗೆ ನಾಮಪತ್ರ ಸಲ್ಲಿಸುವಂತೆ ಶಾಸಕ ಎಂ.ಟಿ.ಕೃಷ್ಣಪ್ಪ ಸೂಚಿಸಿದ್ದರಿಂದ ಬಸವರಾಜು ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಿರೀಕ್ಷೆಯಂತೆ ಮಂಗೀಕುಪ್ಪೆ ಬಸವರಾಜು ಅವಿರೋಧವಾಗಿ ಆಯ್ಕೆಯಾದರು. ತಹಸೀಲ್ದಾರ್ ನಂಜಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ, ಸಮಿತಿಯ ಉಪಾಧ್ಯಕ್ಷರಾದ ಗೋವಿಂದಯ್ಯ, ಸದಸ್ಯರಾದ ಕೊಂಡಜ್ಜಿ ವಿಶ್ವನಾಥ್, ಕುಶಾಲ್ ಕುಮಾರ್, ಶಂಕರೇಗೌಡ, ಕಡೇಹಳ್ಳಿ ಲಿಂಗೇಗೌಡ, ರಾಮಚಂದ್ರು, ಆಂಜನಪ್ಪ, ತಾಲೂಕು ಪಂಚಾಯ್ತಿ ಸದಸ್ಯರಾದ ಎಂ.ಡಿ.ರಮೇಶ್ ಗೌಡ ಮೊದಲಾದವರು ಅಭಿನಂದಿಸಿದರು.