ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವೀಳ್ಯದೆಲೆ: ಸಂಶೋಧನೆಗೆ ಸಲಹೆ

Rashmi Kasaragodu
Updated On : 2 Feb 2014, 1:09 am

ಕ.ಪ್ರ.ವಾರ್ತೆ   ತುಮಕೂರು   ಫೆ.1
ಮುಂದಿನ ದಿನಗಳಲ್ಲಿ ವಿಜ್ಞಾನಿಗಳು ವೀಳ್ಯದೆಲೆ ಬೆಳೆಯಲ್ಲಿ ಸಾಕಷ್ಟು ಸಂಶೋಧನೆ ಕೈಗೊಳ್ಳಬೇಕಾಗಿದೆ. ಅಧುನಿಕ ಬೇಸಾಯ ಪದ್ಧತಿ, ಹೆಚ್ಚು ಇಳುವರಿ ಕೊಡುವ ರೋಗ ರಹಿತ ತಳಿಗಳನ್ನು ರೈತರಿಗೆ ನೀಡಬೇಕು ಎಂದು ತುಮಕೂರು ವಿವಿ ಕುಲಪತಿ ರಾಜಾಸಾಬ್ ಸಲಹೆ ನೀಡಿದರು.
ಅವರು ಹಿರೇಹಳ್ಳಿಯಲ್ಲಿ ನಡೆದ ವೀಳ್ಯದೆಲೆ ಬೆಳೆಗಾರರ ಮತ್ತು ವಿಜ್ಞಾನಿಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವೀಳ್ಯದೆಲೆ ಒಂದು ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದು ಶುಭದಿನಗಳಲ್ಲಿ ಹಾಗೂ ಶುಭ ಸಂದರ್ಭಗಳಲ್ಲಿ ವೀಳ್ಯದೆಲೆಯನ್ನು ಉಪಯೋಗಿಸುವ ವಾಡಿಕೆಯಾಗಿದೆ. ಇದು ಒಂದು ಮಹತ್ವದ ಸಸ್ಯವಾಗಿದ್ದು ಸಾಕಷ್ಟು ಪ್ರಮುಖ್ಯತೆಯನ್ನು ಪಡೆದಿದೆ. ವೀಳ್ಯದೆಲೆಯನ್ನು ತಾಂಬೂಲದ ರೂಪದಲ್ಲಿ ಊಟವಾದ ನಂತರ ಅಡಕೆ ಮತ್ತು ಸುಣ್ಣದ ಜೊತೆಗೆ ಸೇವಿಸುವುದು ಸಂಪ್ರದಾಯ. ವೀಳ್ಯದೆಲೆಯನ್ನು  ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಧಾನ ವಿಜ್ಞಾನಿ ಡಾ. ಟಿ. ವಸಂತಕುಮಾರ ಹಿರೇಹಳ್ಳಿ ಕೇಂದ್ರದಲ್ಲಿ ಮುಂಬರುವ 12 ನೇಯ ವಾರ್ಷಿಕ ಯೋಜನೆಗಳಲ್ಲಿ ವೀಳ್ಯದೆಲೆಯಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳುವುದಕ್ಕಾಗಿ ವಿವಿದ ಯೋಜನೆಗಳು ಭಾರತ ಸರ್ಕಾರದ ಅನುದಾನದಲ್ಲಿ ಬರುವುದರಿಂದ ತುಮಕೂರು ಜಿಲ್ಲೆಯ ರೈತರಿಗೆ ಅನುಕೂಲವಾಗುವುದೆಂದು ಹೇಳಿದರು. ವಿಶೇಷ ಆಹ್ವಾನಿತರಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಅಶ್ವತ್ಥ್  ವೀಳ್ಯದೆಲೆ ಬೆಳೆಯ ಬಗ್ಗೆ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ. ಅದಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ಸಾಕಷ್ಟು ಅನುದಾನದ ಸೌಲಭ್ಯ ಇದೆ. ವಿಜ್ಞಾನಿಗಳು ಮತ್ತು ರೈತರು ಇದನ್ನು  ಸದುಪಯೋಗ ಪಡೆಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕುಮಾರ ನಾಗರಾಜ, ಸಾಗರನಹಳ್ಳಿ ಪ್ರಭು, ಡಾ. ಎಲ್. ಬಿ ನಾಯ್ಕ, ಡಾ. ಎನ್. ಲೋಗಾನಂದ್, ಸವಿತ, ಉಪಸ್ಥಿತರಿದ್ದರು. ತಾಂತ್ರಿಕ ಚರ್ಚಾಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಟಿ. ವಸಂತ ಕುಮಾರ, ಎಮ್. ಅರ್. ಹೆಗಡೆ, ಸಿ.ಕೆ. ನಾರಾಯಣ, ಎ.ಎನ್. ಗಣೇಶಮೂರ್ತಿ, ಎಂ. ಪ್ರಭಾಕರ್, ಎಂ. ಎಸ್. ರಾವ್, ಕೆ.ಎಸ್. ಶಿವಶಂಕರ, ಟಿ.ಎಮ್. ಗಜಾನನ, ವಿ. ಶ್ರೀಧರ್, ಕೆ.ಜಿ. ಪಳ್ಯೆ, ಕೆ. ಹಿಮಬಿಂದು, ಎಂ.ಎ. ಸೂರ್ಯನಾರಾಯಣ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 197 ಕ್ಕೂ ಹೆಚ್ಚು ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿ ಉದ್ಘಾಟನೆ ನಂತರ ವಿಚಾರ ಸಂಕಿರಣ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕ್ಷೇತ್ರದಲ್ಲಿ 120 ಕ್ಕೂ ಹೆಚ್ಚು ತಳಿಗಳ ಸಂಗ್ರಹಣೆಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.


ವೀಳ್ಯದೆಲೆ ಒಂದು ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದು ಶುಭದಿನಗಳಲ್ಲಿ ಹಾಗೂ ಶುಭ ಸಂದರ್ಭಗಳಲ್ಲಿ ವೀಳ್ಯದೆಲೆಯನ್ನು ಉಪಯೋಗಿಸುವ ವಾಡಿಕೆಯಾಗಿದೆ. ಇದು ಒಂದು ಮಹತ್ವದ ಸಸ್ಯವಾಗಿದ್ದು ಸಾಕಷ್ಟು ಪ್ರಮುಖ್ಯತೆಯನ್ನು ಪಡೆದಿದೆ.
ಟಿ  ರಾಜಾಸಾಬ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement