ಸುನಂದಾಗೆ ಸಮಗ್ರ ಮಹಿಳಾ ಪ್ರಶಸ್ತಿ
ತುಮಕೂರು: ತುಮಕೂರಿನಲ್ಲಿ ಎಸ್ಎಸ್ಐಟಿ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಸತ್ಯಪ್ರೇಮಸಾಯಿ ಮಹಿಳಾ ಸಮಾಜದ ಕಾರ್ಯದರ್ಶಿ ಸುನಂದ ಬಿ.ಎಚ್. ಅವರಿಗೆ ಯೂತ್ ಕ್ಲಬ್ ಅವಾರ್ಡ್ ಪ್ರದಾನ ಮಾಡಲಾಯಿತು. ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ವತಿಯಿಂದ 2013-14ನೇ ಸಾಲಿನ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್. ನಟರಾಜನ್, ಎ. ಅಂದಪ್ಪ ದೋನಿ, ಜಮದಾರ್, ಟಿ.ಜೆ. ಸಂಜಯನಾಯ್ಕ, ಉಮೇಶ್ ಮುಂತಾದವರು ಇದ್ದರು.