ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕ್ರೀಡೆಯಿಂದ ಆರೋಗ್ಯ ಭಾಗ್ಯ, ಯುವ ಜನತೆ ದೈಹಿಕ ಬೆಳವಣಿಗೆ

Rashmi Kasaragodu
Updated On : 3 Feb 2014, 12:57 pm

ಕ.ಪ್ರ.ವಾರ್ತೆ    ಕೊರಟಗೆರೆ    ಫೆ.2
ಕ್ರೀಡೆಯಿಂದ ಆರೋಗ್ಯ ಎನ್ನುವಂತಹ ಸಂದೇಶವನ್ನು ಭಾರತ ಇಡೀ ವಿಶ್ವಕ್ಕೆ ನೀಡಿದ್ದು, ಇಡೀ ವಿಶ್ವದಲ್ಲಿ ನೆಮ್ಮದಿಯ ದೇಶ ಎಂದರೆ ಭಾರತ. ಇದಕ್ಕೆ ಕಾರಣ ಇಲ್ಲಿನ ಕ್ರೀಡೆಗಳು ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಧ್ಯಾನ್ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷ-ಮಹಿಳೆಯ ಮ್ಯಾರಥಾನ್ ಓಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯುವ ಜನತೆಯ ಸರ್ವತೋಮುಖ ಬೆಳವಣೆಗೆಗೆ ಕ್ರೀಡೆ ಅತ್ಯಾವಶ್ಯಕ ಎಂದರು.
ಯುವ ಜನತೆ ಕ್ರೀಡೆಗಳಲ್ಲಿ ಹೆಚ್ಚು ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದು ಎಲೇರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಹನುಮಂತನಾಥಸ್ವಾಮೀಜಿ ತಿಳಿಸಿದರು.
ಇಡೀ ವಿಶ್ವದಲ್ಲಿ ಕ್ರೀಡೆಗೆ ಭಾರತ ಹೆಸರುವಾಸಿ ಭಾರತೀಯರಿಗೆ ಕ್ರೀಡಾ ಪ್ರೇಮ ಹೆಚ್ಚು ನಮ್ಮ ಹಿಂದಿನ ನಮ್ಮ ಪೂರ್ವಜನರು ಕ್ರೀಡೆಗೆ ಎಷ್ಟು ಮಹತ್ವ ನೀಡಿದ್ದರು ಎನ್ನುವುದನ್ನು ನಮ್ಮ ಜನಪದ ಕ್ರೀಡಗಳಿಂದ ತಿಳಿಯಬಹುದು ಎಂದು ಶಾಸಕ ಪಿ.ಆರ್ ಸುಧಾಕರ್ ಲಾಲ್ ತಿಳಿಸಿದರು.
ಚಲನಚಿತ್ರ ನಿರ್ಮಾಪಕ ಮುರುಳೀದರ್ ಹಾಲಪ್ಪ, ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಅಜಯ್  ಗೌಡ, ತಾ.ಪಂ ಅಧ್ಯಕ್ಷೆ ಅನಿತಾ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು,  ತಾಲೂಕು ಬಿಜೆಪಿ ಅಧ್ಯಕ್ಷ ಪವನ್ ಕುಮಾರ್, ಪ.ಪಂ ಉಪಾಧ್ಯಕ್ಷ ನಯಾಜ್ ಅಹಮದ್, ಸದಸ್ಯ ಶ್ರೀನಿವಾಸ್, ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಜಗ್ಗೇಶ್ ಅಭಿಮಾನಿಗಳ ಬಳಗದ ಅಧ್ಯಕ್ಷ ಮಲ್ಲಯ್ಯ, ಜೆ.ಕೆ. ಮೆಮೋರಿಯಲ್ ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ಹನುಮಂತರೆಡ್ಡಿ, ಧ್ಯಾನ್ ಚಂದ್ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಡಿ.ಎಂ. ರಾಘವೇಂದ್ರ, ಕಾರ್ಯದರ್ಶಿ ಸತೀಶ್ ಕುಮಾರ್, ಪದಾಧಿಕಾರಿಗಳಾದ ಮಾರುತಿ, ಅರವಿಂದ್, ಕಾಂತರಾಜು, ಅನಿಲ್ ಕುಮಾರ್, ಡಿ.ಎಸ್. ರವಿಕುಮಾರ್, ಸುನಿಲ್, ಚಂದ್ರಶೇಖರ್, ಪುರಷೋತ್ತಮ್, ದಿಲೀಪ್, ಶ್ರೀನಿವಾಸ್, ಕಿರಣ್ ಕುಮಾರ್, ಅರುಣ್ ಕುಮಾರ್, ಸೋಮ,  ಶ್ಯಾಮ್ ಸುಂದರ್, ಬಾಲಾಜಿ ಮತ್ತಿತರರು ಹಾಜರಿದ್ದರು.
ಮ್ಯಾರಥಾನಲ್ಲಿ 100 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಹಿಸಿ ಪುರುಷರ ಮೊದಲ ಬಹುಮಾನ 10 ಸಾವಿರ ಮತ್ತು ಪಾರಿತೋಷಕವನ್ನು ಮೂಡಬಿದರೆ ಶಿವಾನಂದ್ ಪಡೆದರೆ ಮಹಿಳೆಯರ ವಿಭಾಗದ ಮೊದಲ ಬಹುಮಾನವನ್ನು ಮಹಾಲಕ್ಷ್ಮಿ ಪಡೆದರು. ಪ್ರತೀ ವಿಭಾಗದಲ್ಲಿ ಪ್ರತ್ಯೇಕ 6 ಬಹಮಾನಗಳನ್ನು ನೀಡಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement