ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಯುವಜನತೆ ಕ್ರೀಡೆಗಳತ್ತ ಒಲಿದರೆ ದುಶ್ಚಟಗಳಿಂದ ದೂರ ಮಾಡಲು ಸಾಧ್ಯ'

Rashmi Kasaragodu
Updated On : 3 Feb 2014, 12:57 pm

ಕೊರಟಗೆರೆ: ಯುವಜನತೆಯನ್ನು ಕ್ರೀಡೆಗಳತ್ತ ಸೆಳೆದರೆ ಅವರನ್ನು ದುಶ್ಚಟಗಳಿಂದ ದೂರಮಾಡಬಹುದು ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಅವರು ಪಟ್ಟಣದಲ್ಲಿ  ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಮತ್ತು ರಾಜ್ಯ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪದ್ಯಾವಳಿ ಉದ್ಘಾಟನೆ ಮಾಡಿ ಮಾತನಾಡಿದರು.
ಇಂದು ದೇಶೀಕ್ರೀಡೆಗಳು ನಷಿಸುತ್ತಿದ್ದು ಇವುಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆಯಿದೆ, ಯುವ ಜನತೆ ದೇಶೀ ಕ್ರೀಡೆಗಳಿಗೆ ಹೆಚ್ಚಿನ ಒಲವು ತೋರಬೇಕು ಎಂದು ಆಶಿಸಿದರು.
ಗೆಲ್ಲುವುದಕ್ಕಾಗಿ ಕ್ರೀಡೆ ಅಲ್ಲ. ಕ್ರೀಡೆ ಅನುಭವಕ್ಕಾಗಿ ಕ್ರೀಡಾ ಪಟುಗಳು ಪ್ರತೀ ಸೋಲಿನಲ್ಲೂ ಅನುಭವಗಳನ್ನು ಕಲಿಯುತ್ತಾ ಮುಂದೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಹಕಾರಿ ಎಂದರು. ಶಾಸಕ ಪಿ.ಆರ್. ಸುಧಾಕರ್ ಲಾಲ್ ಮಾತನಾಡಿ ಕಬಡ್ಡಿ ಗಂಡುಗಲಿಗಳು ನಮ್ಮ ದೇಶಿ ಆಟಗಳಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ನಮ್ಮ ದೇಶಿ ಕ್ರೀಡೆಗಳಲ್ಲಿ  ಅನಾಹುತ ಅವಘಡಗಳು ಸಂಭವಿಸುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಡಿ.ಸಿ ಗೌರೀಶಂಕರ್, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ನರಸಿಂಹರಾಜು,  ಡಾ. ರಾಜ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಕೆ.ಎಸ್. ಶ್ರೀನಿವಾಸಶೆಟ್ಟಿ, ಜಿ.ಪಂ ಸದಸ್ಯೆ ದಾಕ್ಷಾಯಿಣಿ,  ತಾ.ಪಂ ಅಧ್ಯಕ್ಷೆ ಅನಿತಾ, ಸದಸ್ಯರಾದ ಎಲ್.ವಿ. ಪ್ರಕಾಶ್, ಬಿ.ಆರ್. ಲೋಕೇಶ್, ವಡ್ಡಗೆರೆ ಗ್ರಾ.ಪಂ ಅಧ್ಯಕ್ಷ ಸಿದ್ದಲಿಂಗಪ್ಪ, ಮುಖಂಡರಾದ ಮಹಾಲಿಂಗಪ್ಪ, ಎಲ್. ರಾಜಣ್ಣ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement