ಲೋಕೇಶ್ವರ ಪುತ್ರಿ ನಿಶ್ಚಿತಾರ್ಥದಲ್ಲಿ ಯಡಿಯೂರಪ್ಪ
ತಿಪಟೂರು: ಮಾಜಿ ಮುಖ್ಯಮಂತ್ರಿ ಬಿಜೆಪಿ ವರಿಷ್ಠ ಯಡಿಯೂರಪ್ಪನವರ ಜೊತೆ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು, ತಾಲೂಕು ಬಿಜೆಪಿ ಮುಖಂಡ ಲೋಕೇಶ್ವರ ಪುತ್ರಿಯ ನಿಶ್ಚಿತಾರ್ಥಕ್ಕೆ ಭಾನುವಾರ ಇಲ್ಲಿಗೆ ಆಗಮಿಸಿದರು.
ಜೊತೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಸಕ ಸುರೇಶ್ಗೌಡ, ಮುಖಂಡರಾದ ಕಿರಣ್ಕುಮಾರ್, ಮಾಜಿ ಶಾಸಕ ಬಿ. ಸಿ. ನಾಗೇಶ್ ಮತ್ತಿತರ ಮುಖಂಡರು ಸಮಾರಂಭಕ್ಕೆ ಒಟ್ಟಿಗೆ ಆಗಮಿಸಿದ್ದರು. ಯಡಿಯೂರಪ್ಪ ಆಗಮಿಸುವ 15ನಿಮಿಷ ಮುಂಚೆ ಮಾಜಿ ಮಂತ್ರಿ, ಜಿಲ್ಲಾ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಬಂದರು. ಯಡಿಯೂರಪ್ಪ ಆಗಮಿಸುವ ವೇಳೆಗೆ ಹೊರನಡೆದಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಜಿ.ಎಸ್. ಬಸವರಾಜು ಯಡಿಯೂರಪ್ಪನವರ ಜೊತೆಯೇ ಬರುತ್ತಾರೆಂಬ ಸುದ್ದಿ ತಿಳಿದ ತಾಲೂಕಿನ ಬಹುತೇಕ ಕಾಂಗ್ರೆಸ್ ಮುಖಂಡರು ಕಾದಿದ್ದು ಬಸವರಾಜು ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ನಾವೂ ಅವರ ಗೆಲವಿಗೆ ಶ್ರಮಿಸುತ್ತೇವೆಂದು ಹೇಳುತ್ತಿದ್ದದ್ದು ವಿಶೇಷವಾಗಿತ್ತು.