ಉಚಿತ ತರಬೇತಿ ಅರ್ಜಿ ಆಹ್ವಾನ
ತಿಪಟೂರು: ನಗರಸಭಾ ವ್ಯಾಪ್ತಿಯಲ್ಲಿ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯಡಿ ಸ್ಟೆಪ್-ಅಪ್ ಘಟಕದಡಿ 2013-14ನೇ ಸಾಲಿಗೆ ಸಂಬಂಧಿಸಿದಂತೆ 18ರಿಂದ 35 ವರ್ಷ ವಯೋವುತಿಯ ಬಡತನ ರೇಖೆಗಿಂತ ಕೆಳಗಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ವಿವಿಧ ರೀತಿಯ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯೊಂದಿಗೆ ವಿದ್ಯಾರ್ಹತೆಯ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರದೊಂದಿಗೆ ಫೆ. 15ರಂದು ಸಂಜೆ 5ಗಂಟೆಯೊಳಗೆ ನಗರಸಭಾ ಕಾರ್ಯಾಲಯಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಸ್.ಜೆ.ಎಸ್.ಆರ್.ವೈ ಶಾಖೆ ನಗರಸಭೆ ಕಾರ್ಯಾಲಯ ಸಂಪರ್ಕಿಸಬಹುದು.