ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕನ್ನಡಿಗರು ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕು: ಹಂಸಲೇಖ

Rashmi Kasaragodu
Updated On : 4 Feb 2014, 1:34 am

ತುರುವೇಕೆರೆ: ಕನ್ನಡಿಗರು ಪ್ರಥಮ ಆದ್ಯತೆ ನೀಡಿ  ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ಇತರೆ ರಾಜ್ಯಗಳಲ್ಲಿ ಭಾಷಾ ವ್ಯಾಮೋಹದಿಂದಾಗಿ ಅವರ ಭಾಷಾ ಚಿತ್ರಗಳು ಹಣಗಳಿಕೆಯಿಂದ ಹಿಡಿದು ಇತರ ಸಣ್ಣಪುಟ್ಟ ಕಲಾವಿದರು ತಂತ್ರಜ್ಞರನ್ನೂ ಬೆಳೆಸಲು ಸಹಾಯಕವಾಗಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಪಟ್ಟಣದ ಪ್ರಿಯಾ ಇಂಗ್ಲಿಷ್ ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡಿಗರು ಬೇರೆ ಭಾಷೆಯ ವ್ಯಾಮೋಹವನ್ನು ಬದಿಗೊತ್ತಿ ಕನ್ನಡ ಚಿತ್ರೋದ್ಯಮಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು. ಡಬ್ಬಿಂಗ್ ಹಾಗೂ ರಿಮೇಕ್ ಸಂಸ್ಕೃತಿಯಿಂದ ಕನ್ನಡ ಚಿತ್ರರಂಗಕ್ಕೆ ತೊಂದರೆಯೇ ಹೊರೆತು ಒಳಿತಲ್ಲ. ಕೇವಲ ಹಣ ಗಳಿಕೆಯನ್ನೇ ಗುರಿಯಾಗಿಸಿಕೊಂಡರೆ ರಾಜ್ಯದ ಸಾಂಸ್ಕೃತಿಕ ನೆಲೆಗಟ್ಟಿಗೆ ಬೆಲೆ ಇಲ್ಲದಂತಾಗುತ್ತದೆ ಎಂದರು. ತಮ್ಮ ತನವನ್ನು ಪ್ರತಿನಿಧಿಸುವ ಕನ್ನಡದ ಕತೆ, ಕಾದಂಬರಿಗಳನ್ನು ಆಧರಿಸಿದ ಕನ್ನಡ ಚಿತ್ರಗಳು ತೆರೆಗೆ ಬಂದರೆ ಪ್ರತಿಯೊಬ್ಬ ಕನ್ನಡಿಗರೂ ಹೆಮ್ಮೆಪಡುವಂತಹುದಾಗುತ್ತದೆ ಎಂದು ಹಂಸಲೇಖ ಅಭಿಪ್ರಾಯಪಟ್ಟರು. ಪ್ರಾಧ್ಯಾಪಕ ಕೆ. ಪುಟ್ಟರಂಗಪ್ಪ ಹಾಗೂ ಹಂಸಲೇಖಾ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ತಜ್ಞ ಎನ್. ಸತ್ಯಪ್ರಕಾಶ್, ಎಸಿಪಿ ಎಸ್.ಎನ್. ಗಂಗಾಧರ್, ಕರ್ನಾಟಕ ರಾಜ್ಯ ಪ್ರಾಂಶುಪಾಲರ ಹಾಗೂ ಎಂ.ಎನ್. ಚಂದ್ರೇಗೌಡ, ಪುಷ್ಪಲತಾ, ಧನಪಾಲ್, ಮುಖ್ಯೋಪಾಧ್ಯಾಯ ಚಿಕ್ಕಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement