ಕಾಡಾನೆ ಪಳಗಿಸಲು ಬಂತು ಗಜಪಡೆ
ತುಮಕೂರು: 15 ದಿನದಿಂದ ತುಮಕೂರು ಬಳಿ ಬೀಡು ಬಿಟ್ಟು ಮಹಿಳೆಯೊಬ್ಬರನ್ನು ಬಲಿ ತೆಗೆದುಕೊಂಡಿರುವ 9 ಕಾಡಾನೆಗಳನ್ನು ಪಳಗಿಸಿ ಮತ್ತೆ ಬನ್ನೇರುಘಟ್ಟ ಅಭಯಾರಣ್ಯಕ್ಕೆ ಕಳುಹಿಸಲು ದುಬಾರೆಯಿಂದ ಸೋಮವಾರ 3 ಆನೆಗಳನ್ನು ಕರೆಸಿಕೊಳ್ಳಲಾಗಿದೆ. ಸೋಮವಾರ ಮಧ್ಯಾಹ್ನ ಬಂದಿಳಿದ ಈ ಆನೆಗಳು ಸಂಜೆ 4ರಿಂದ 9 ಆನೆಗಳನ್ನು ಪಳಗಿಸುವ ಕಾರ್ಯದಲ್ಲಿ ತೊಡಗಿವೆ. ಸದ್ಯ ಆನೆಗಳು ಇಲ್ಲಿನ ಮಲ್ಲಸಂದ್ರ ಕೆರೆಯಲ್ಲಿ ಬೀಡು ಬಿಟ್ಟಿವೆ.