ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಇಳಿಮುಖ
ಕನ್ನಡಪ್ರಭ ವಾರ್ತೆ ತುಮಕೂರು ಫೆ.3
ತುಮಕೂರು ಜಿಲ್ಲೆಯಲ್ಲಿ ಘೋರ ಅಪರಾಧ, ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಪೊಲೀಸ್ ಇಲಾಖೆ ದಕ್ಷತೆಗೆ ಕನ್ನಡಿ ಹಿಡಿದಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ತಿಳಿಸಿದರು.
ಅವರು ಎಸ್ಪಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾರ್ಷಿಕ ಅಂಕಿ - ಅಂಶಗಳ ಪಟ್ಟಿಯೊಂದಿಗೆ ಮಾತನಾಡಿದ ಎಸ್ಪಿ, 2012 ನೇ ಸಾಲಿನಲ್ಲಿ 81 ಕೊಲೆ ಪ್ರಕರಣಗಳು ವರದಿಯಾಗಿದ್ದು, 69 ಪತ್ತೆಯಾಗಿದ್ದವು. 2013 ರಲ್ಲಿ 61 ಕೊಲೆ ಪ್ರಕರಣಗಳು ವರದಿಯಾಗಿದ್ದು, 55 ಪತ್ತೆಯಾಗಿದ್ದು, 20 ಕೊಲೆ ಪ್ರಕರಣಗಳು ಕಡಿಮೆಯಾಗಿವೆ.
2012 ರಲ್ಲಿ 13 ದರೋಡೆ ಪ್ರಕರಣಗಳು ವರದಿಯಾಗಿದ್ದು, ಅಷ್ಟೂ ಪ್ರಕರಣಗಳು ಪತ್ತೆಯಾಗಿದ್ದವು. 2013 ರಲ್ಲಿ 17 ಪ್ರಕರಣಗಳು ವರದಿಯಾಗಿದ್ದು, 17 ಸಹ ಪತ್ತೆಯಾಗಿವೆ. 2013 ನೇ ಸಾಲಿನ ದರೋಡೆ ಪ್ರಕರಣಗಳ ಪೈಕಿ, 7 ಪ್ರಕರಣಗಳು ದರೋಡೆ ಮಾಡುವ ಪ್ರಯತ್ನಗಳಾಗಿವೆ. 4 ಪ್ರಕರಣಗಳು ಎರಡು ಗುಂಪುಗಳ ಮಧ್ಯೆ ಜಗಳ ನಡೆದ ಸಮಯದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡ ಪ್ರಕರಣಗಳಾಗಿವೆ.
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ (ಸರಗಳ್ಳತನ ಹೊರತುಪಡಿಸಿ) 2012 ರಲ್ಲಿ 15 ಪ್ರಕರಣಗಳು ವರದಿಯಾಗಿದ್ದು, 9 ಪ್ರಕರಣಗಳು ಪತ್ತೆಯಾಗಿದ್ದವು. 2013 ರಲ್ಲಿ 20 ಪ್ರಕರಣಗಳು ವರದಿಯಾಗಿದ್ದು, 14 ಪ್ರಕರಣಗಳು ಪತ್ತೆಯಾಗಿವೆ.
ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 2012 ರಲ್ಲಿ 75 ಪ್ರಕರಣಗಳು ವರದಿಯಾಗಿದ್ದು, 54 ಪ್ರಕರಣಗಳು ಪತ್ತೆಯಾಗಿದ್ದವು. 2013 ರಲ್ಲಿ 65 ಪ್ರಕರಣಗಳು ವರದಿಯಾಗಿದ್ದು, 36 ಪ್ರಕರಣಗಳು ಪತ್ತೆಯಾಗಿವೆ. 2013 ರಲ್ಲಿ ಒಟ್ಟಾರೆಯಾಗಿ 10 ಸರಗಳ್ಳತನ ಪ್ರಕರಣಗಳು ಕಡಿಮೆಯಾಗಿವೆ.
ತುಮಕೂರು ನಗರದಲ್ಲಿ 2012 ರಲ್ಲಿ 41 ಸರಗಳ್ಳತನ ಪ್ರಕರಣಗಳು ವರದಿಯಾಗಿ, 29 ಪ್ರಕರಣಗಳು ಪತ್ತೆಯಾಗಿದ್ದವು. 2013 ರಲ್ಲಿ 37 ಪ್ರಕರಣಗಳು ದಾಖಲಾಗಿದ್ದು, 21 ಪ್ರಕರಣಗಳು ಪತ್ತೆಯಾಗಿವೆ. ಕಳೆದ 3 ತಿಂಗಳಲ್ಲಿ ಯಾವುದೇ ಸರಗಳ್ಳತನ ವರದಿಯಾಗಿಲ್ಲ ಎಂದು ತಿಳಿಸಿದ ರಮಣಗುಪ್ತ, ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು.
2012 ರಲ್ಲಿ 1092 ಘೋರ ಅಪರಾಧ ಪ್ರಕರಣಗಳು ವರದಿಯಾಗಿದ್ದು, 2013 ರಲ್ಲಿ 1004 ವರದಿಯಾಗಿದ್ದು, 88 ಪ್ರಕರಣಗಳು ಕಳೆದ ವರ್ಷ ಕಡಿಮೆಯಾಗಿದ್ದು, ಒಟ್ಟಾರೆ ಶೇ. 8 ರಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಮಾಹಿತಿ ನೀಡಿದರು.
ಒಟ್ಟು ಅಪರಾಧ ಪ್ರಕರಣಗಳ ವಿವರಗಳು: 2012 ರಲ್ಲಿ ಒಟ್ಟು ಐಪಿಸಿ ಪ್ರಕರಣಗಳು, 5317 ದಾಖಲಾಗಿವೆ. ವಿಶೇಷ ಹಾಗೂ ಸ್ಥಳೀಯ ಕಾಯ್ದೆಯಡಿ 113, ಸೆಕ್ಯೂರಿಟಿ ಪ್ರಕರಣಗಳು 430, ಮನುಷ್ಯ ಕಾಣೆ ಪ್ರಕರಣಗಳು 527 ಒಟ್ಟು 7387, 2013 ರಲ್ಲಿ ಒಟ್ಟು ಐಪಿಸಿ ಪ್ರಕರಣಗಳು 4657, ವಿಶೇಷ ಹಾಗೂ ಸ್ಥಳೀಯ ಕಾಯ್ದೆಯಡಿ 1179, ಸೆಕ್ಯೂರಿಟಿಯಡಿ 1044 ಕಾಣೆಯಾದ ಪ್ರಕರಣಗಳು 464 ದಾಖಲಾಗಿದ್ದು, ಒಟ್ಟು 7344.
ಇತರೆ ಪ್ರಕರಣ: ದಾಖಲಿಸಿದ ಪ್ರಕರಣ 2012 ರಲ್ಲಿ 68131, ದಂಡ ವಸೂಲಿ, 1,41,99,900. 2013 ರಲ್ಲಿ 76,864, ದಂಡ ವಸೂಲಿ, 1,81,89,400. ಮಟ್ಕಾ ಪ್ರಕರಣ 2102 ರಲ್ಲಿ 79 ದಾಖಲಾಗಿದ್ದು, 1,60,791 ದಂಡ ವಸೂಲಾಗಿದೆ. 2013 ರಲ್ಲಿ 104 ಪ್ರಕರಣ ದಾಖಲಾಗಿದ್ದು, 1,85,466 ರು. ದಂಡ ವಸೂಲಾಗಿದೆ. ಜೂಜಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ 2012 ರಲ್ಲಿ 438 ಪ್ರಕರಣಗಳು ದಾಖಲಾಗಿದ್ದು, 30,70,618 ರು. ದಂಡ ವಸೂಲಾಗಿದೆ. 2013 ರಲ್ಲಿ 466 ಪ್ರಕರಣಗಳು ದಾಖಲಾಗಿದ್ದು, 37,55,202 ರು. ದಂಡ ವಸೂಲಾಗಿದೆ. ಅಕ್ರಮ ಮರಳು ಸಾಗಣೆಗೆ ಸಂಬಂಧಿಸಿದಂತೆ 2012 ರಲ್ಲಿ 43 ಪ್ರಕರಣಗಳು ದಾಖಲಾಗಿದ್ದು, 49,23,000 ರು. ದಂಡ ವಸೂಲು ಮಾಡಲಾಗಿದೆ. 2013 ರಲ್ಲಿ 154 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ದಾಖಲಾಗಿದ್ದು, 1,48,72,300 ರು. ದಂಡ ವಸೂಲು ಮಾಡಲಾಗಿದೆ.
ಕಳವು ಪತ್ತೆ ಮಾಡಿದ ಸ್ವತ್ತಿನ ವಿವರ: 2012 ರಲ್ಲಿ ಆಸ್ತಿ, ಹಣಕ್ಕಾಗಿ ಮಾಡಿದ ಕೊಲೆ ಪ್ರಕರಣಗಳಲ್ಲಿ 1,30,650.00 ರು.ಕಳುವಾಗಿದ್ದು, ಇಷ್ಟು ಮೊತ್ತದ ಸ್ವತ್ತನ್ನು ಮರು ವಶಪಡಿಸಿಕೊಳ್ಳಲಾಗಿದೆ. ಡಕಾಯಿತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 3,68,500.00 ರು. ಮೊತ್ತದ ಸ್ವತ್ತು ಡಕಾಯಿತಿಯಾಗಿದ್ದು, ಅಷ್ಟು ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆಗೆ ಸಂಬಂಧಿಸಿದಂತೆ 75,06,918.00 ರು. ಗಳಷ್ಟು ಮೊತ್ತದ ಸ್ವತ್ತು ಕಳುವಾಗಿದ್ದು, ಇದರಲ್ಲಿ 32,04,400.00 ರು ಮೌಲ್ಯದ ಸ್ವತ್ತನ್ನು ಪತ್ತೆ ಹಚ್ಚಲಾಗಿದೆ. ಹೆಚ್ಬಿಟಿಗೆ ಸಂಬಂಧಿಸಿದಂತೆ 2,67,05,165.00 ರು. ಮೌಲ್ಯದ ವಸ್ತುಗಳು ಕಳುವಾಗಿದ್ದು, ಇದರಲ್ಲಿ 1,35,74,875.00 ರು. ಗಳಷ್ಟು ಮೊತ್ತದ ವಸ್ತುಗಳನ್ನು ಮರು ವಶಕ್ಕೆ ಪಡೆಯಲಾಗಿದೆ. ಇತರೆ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 3,37,71,418.00 ರು. ಮೊತ್ತದ ವಸ್ತುಗಳು ಕಳುವಾಗಿದ್ದು,1,81,55,71.00 ರು. ಗಳಷ್ಟು ಮೌಲ್ಯದ ವಸ್ತುಗಳನ್ನು ಮರು ವಶಕ್ಕೆ ಪಡೆಯಲಾಗಿದೆ. 41 ಸಿಎಲ್(ಡಿ)-102 ಸಿಆರ್ ಪಿಸಿ ಆಸ್ತಿಗೆ ಸಂಬಂಧಿಸಿದಂತೆ 6,91,000.00 ರು ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
2013 ರಲ್ಲಿ 17,30,000.00 ರು. ಗಳಷ್ಟು ಆಸ್ತಿ, ಹಣಕ್ಕಾಗಿ ಮಾಡಿದ ಕೊಲೆ ಪ್ರಕರಣಗಳಲ್ಲಿ ನಷ್ಟವಾಗಿದ್ದು, 17,12, 920.00 ರು.ಗಳಷ್ಟು ಸ್ವತ್ತನ್ನು ಪತ್ತೆ ಹಚ್ಟಲಾಗಿದೆ. ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ 75,98,300.00 ರು. ಆಸ್ತಿ ಕಳುವಾಗಿದ್ದು, ಇದರಲ್ಲಿ 72,09,300.00 ರು.ಗಳಷ್ಟು ವಸ್ತುಗಳನ್ನು ಪತ್ತೆ ಮಾಡಿ, ಮರುವಶಕ್ಕೆ ಪಡೆಯಲಾಗಿದೆ. ರಾಬರಿಗೆ ಸಂಬಂಧಿಸಿದಂತೆ 80,14,065.00 ರು ಮೊತ್ತದ ಆಸ್ತಿ ಕಳುವಾಗಿದ್ದು, ಇದರಲ್ಲಿ 28,51,100.00 ರು. ಮೊತ್ತದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಹೆಚ್ಬಿಟಿ ಗೆ ಸಂಬಂಧಿಸಿದಂತೆ 1,51,57, 826.00 ರು. ಮೊತ್ತದ ಆಸ್ತಿ ನಷ್ಟವಾಗಿದ್ದು, ಇದರಲ್ಲಿ 80,95,810.00 ಗಳಷ್ಟು ಮೌಲ್ಯದ ಆಸ್ತಿಯನ್ನು ಮರುವಶಕ್ಕೆ ಪಡೆಯಲಾಗಿದೆ. ಇತರೆ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 1,39,31,969.00 ರು.ಗಳಷ್ಟು ಮೌಲ್ಯದ ಆಸ್ತಿ ಕಳುವಾಗಿದ್ದು, ಇದರಲ್ಲಿ 91,91,538.00 ರು. ಮೊತ್ತದ ಆಸ್ತಿಯನ್ನು ಮರುವಶಕ್ಕೆ ಪಡೆಯಲಾಗಿದೆ.
41 ಸಿಎಲ್(ಡಿ) 102 ಸಿಆರ್ಪಿಸಿಗೆ ಸಂಬಂಧಿಸಿದಂತೆ 5,18,29,300 ಆಸ್ತಿಯನ್ನು ಮರುವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಲಕ್ಷ್ಮಣ್, ಡಿವೈಎಸ್ಪಿ ಜಗದೀಶ್, ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
252
ಸಿಬ್ಬಂದಿಗೆ ಬಹುಮಾನ
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 2012 ರಲ್ಲಿ 219 ಮಂದಿಗೆ ಬಹುಮಾನ ನೀಡಲಾಗಿತ್ತು. 2013 ರಲ್ಲಿ ಈ ಸಂಖ್ಯೆಯನ್ನು 252 ಕ್ಕೇರಿಸಲಾಗಿದೆ ಎಂದು ಎಸ್ಪಿ ರಮಣಗುಪ್ತ ಮಾಹಿತಿ ನೀಡಿದ್ದಾರೆ.