ಮಾತ್ರೆ ಇಲ್ಲದೆ ಹೆಚ್ಐವಿ ಸೋಂಕಿತರ ಪರದಾಟ
ತುಮಕೂರು: ಮಾತ್ರೆ ನೀಡುವವರು ಇಲ್ಲದೆ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಚ್ಐವಿ ಸೋಂಕಿತರು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದರಿಂದ ಮಾತ್ರೆ ನೀಡಲು ಸಾಧ್ಯವಾಗುತ್ತಿಲ್ಲ. ಈ ಮುಷ್ಕರ ಈಗಾಗಲೇ 5 ದಿನಕ್ಕೆ ಕಾಲಿಟ್ಟಿದ್ದು ಇಲ್ಲಿನ ರೋಗಿಗಳು ಚಿಕಿತ್ಸೆ ಇಲ್ಲದೆ ಪರದಾಡುವಂತಾಗಿದೆ ಎಂದು ಶಿವು ಚಂಗಾವರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದ ಎಆರ್ಟಿ ಹಾಗೂ ಎಲ್ಲಾ ತಾಲೂಕು ಲಿಂಕ್ ಆರ್ಟ್ ಕೇಂದ್ರಗಳು ಬೀಗಮುದ್ರೆಯಾಗಿವೆ. ಇಲ್ಲಿಯ ಸಮಾಲೋಚಕರು, ಟೆಕ್ನಿಷನ್ಗಳು, ಶುಶ್ರೂಷಕರು ಪರದಾಡುವ ಸ್ಥಿತಿ ಇದೆ ಎನ್ನುತ್ತಾರೆ ಶಿವು ಚಂಗಾವರ.