ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಸದ ಡಿ.ಕೆ. ಸುರೇಶ್ ಆರೋಪದಲ್ಲಿ ಹುರುಳಿಲ್ಲ: ತಾಪಂ ಸದಸ್ಯರ ತಿರುಗೇಟು

Vishwanath S
Updated On : 5 Feb 2014, 12:12 pm

ಕುಣಿಗಲ್: ಸಂಸದ ಡಿ.ಕೆ.ಸುರೇಶ್ ಆರೋಪಿಸಿರುವಂತೆ ತಾಪಂನಲ್ಲಿ ಅಳತೆ ಪುಸ್ತಕಗಳ ಮಾರಾಟ ಎಂಬುದು ಸತ್ಯಕ್ಕೆ ದೂರವಾಗಿದ್ದು, ಪುಸ್ತಕ ಮಾರಾಟ ಮಾಡುವಂತ ಕೀಳುಮಟ್ಟಕ್ಕೆ ತಾಪಂ ಅಧಿಕಾರಿಗಳ್ಯಾರು ಇಳಿದಿಲ್ಲ ಎಂದು  ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ತಿರುಗೇಟು ನೀಡಿದ್ದಾರೆ.
ಪಟ್ಟಣದ ತಾಪಂ ಅಧ್ಯಕ್ಷರ ಕೊಠಡಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಪಂನಲ್ಲಿ  ಜೆಡಿಎಸ್ ಆಡಳಿತ ಇರುವ ಕಾರಣ, ಸಂಸದರು, ತಮ್ಮ ಹಿಂಬಾಲಕರು ಹೇಳಿದ ಮಾತನ್ನು ಕೇಳಿ, ತಾಪಂ ಮೇಲೆ ಇಂತಹ ಕ್ಷುಲಕ ಆರೋಪ ಮಾಡುವುದು ಅವರಿಗೆ ಶೋಭೆ ತರುವ ವಿಷಯವಲ್ಲ ಎಂದು ಕಿಡಿಕಾರಿದ್ದಾರೆ.
ನರೇಗಾ ಯೋಜನೆಯಡಿ ತಾಲೂಕಿನ 36 ಗ್ರಾಪಂಗಳಲ್ಲೂ ಪಕ್ಷಬೇಧ ಮರೆತು ಉತ್ತಮ ಸಾಧನೆ ಮಾಡುತ್ತಾ, ಸಮಗ್ರವಾಗಿ ಅಭಿವೃದ್ದಿಯತ್ತ ಸಾಗುತ್ತಿದೆ. ಸಂಸದರು  ಅಭಿವೃದ್ದಿ ನಿಟ್ಟಿನಲ್ಲಿ ಸಹಕರಿಸಿ ತಾಲೂಕನ್ನು ಮುನ್ನಡೆಸಬೇಕೇ ಹೊರತು, ಹಿಂಬಾಲಕರ ಅಧಾರ ರಹಿತ ಮಾತು ಕೇಳಿ ಇಂತಹ ಆರೋಪಗಳನ್ನು ಮಾಡುವುದರಿಂದ ಜನತೆಗೆ ತಪ್ಪು  ಸಂದೇಶ ಹೋಗುತ್ತದೆ ಎಂದು ಕಿವಿಮಾತು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಲ್.ರಾಮಣ್ಣ ಮಾತನಾಡಿ, ಸಂಸದರು ತಾಲೂಕಿಗೆ ಹೇಮಾವತಿ ನೀರು ಹರಿಸುವ ನಿಟ್ಟಿನಲ್ಲಿ ಸಹಕರಿಸದೇ ಗೊಂದಲ ನೀತಿ ಅನುಸರಿಸಿದರು.  ಕುಣಿಗಲ್ ಪಟ್ಟಣಕ್ಕೆ ಕುಡಿಯುವ ನೀರು ಹರಿಸಲು ಕ್ರಮ ಕೈಗೊಳ್ಳಿ ಎಂದು ಮನವಿ ಸಲ್ಲಿಸಿದಾಗ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈಗ ಕ್ಷುಲಕ ಆರೋಪಮಾಡುತ್ತಿರುವುದು ಸರಿಯಲ್ಲ ಎಂದರು. ತಾಪಂ ಅಧ್ಯಕ್ಷೆ ತೇಜಸ್ವಿನಿ, ಜೆಡಿಎಸ್ ಮುಖಂಡರಾದ  ಗಿರೀಶ್, ಕುಮಾರ್. ಸುರೇಶ, ಉಮೇಶ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement