ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಎಚ್‌ಐವಿ ಸೋಂಕಿತರಿಗೆ ಸಹಕಾರ ನೀಡಿ'

Vishwanath S
Updated On : 6 Feb 2014, 12:55 pm

ಹೊಳೆನರಸೀಪುರ: ಹೆಚ್.ಐ.ವಿ ಮತ್ತು ಏಡ್ಸ್‌ನಂತಹ ಮಾರಕ ರೋಗಗಳು ಬರದಂತೆ ತಡೆಯುವುದು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಹೆಚ್‌ಐವಿ ಹಾಗೂ ಏಡ್ಸ್ ಸೋಂಕಿತರನ್ನು ಸಮಾಜದಲ್ಲಿ ಯಾವುದೇ ರೀತಿಯಿಂದ ಬಹಿಷ್ಕರಿಸದೇ, ಅವರೊಡನೆ ಮಾನವೀಯ ಒಡನಾಟದ ಸಹಕಾರವನ್ನು ನೀಡುವುದು ಕೂಡ ಬಹುಮುಖ್ಯ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಈ. ಮಧುಸೂದನ್ ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜಿನ ರೆಡ್‌ರಿಬ್ಬನ್ ಕ್ಲಬ್ ಮತ್ತು ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೆಚ್.ಐ.ವಿ ಹಾಗೂ ಏಡ್ಸ್ ಬಗೆಗಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
1986 ರಲ್ಲಿ ಕೇವಲ ಒಬ್ಬರಿಗಿದ್ದ ಹೆಚ್.ಐ.ವಿ ಸೋಂಕು 2011 ರ ವೇಳೆಗೆ 24 ಲಕ್ಷ ಜನರಿಗೆ ಹೆಚ್.ಐ.ವಿ ಸೋಂಕು ಹರಡಿರುವುದನ್ನು ಅಂಕಿ ಅಂಶಗಳ ವರದಿಗಳು ಹೇಳುತ್ತವೆ ಈ ರೋಗ ಇದೇ ರೀತಿ ಉಳಿದ ಹತ್ತು ವರ್ಷಗಳಲ್ಲಿ ಈ ವರೆಗೆ ಈವರೆಗೆ ಇನ್ನಷ್ಟು ಹೆಚ್ಚಿರಬಹುದೆಂದು ಅಭಿಪ್ರಾಯಪಟ್ಟರು. ಯುವಜನತೆ ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದು ಶೇ. 85ರಷ್ಟು ಹೆಚ್.ಐ.ವಿ ಸೋಂಕು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹಾಗೂ ಉಳಿದ ಶೇ.15ರಷ್ಟು ಹೆಚ್.ಐ.ವಿ ಸೋಂಕಿತ ತಾಯಿಯಿಂದ ಮಗುವಿಗೆ, ಸಂಸ್ಕರಿಸದ ಸೂಜಿಯಿಂದ, ಪರೀಕ್ಷೆಗೊಳಪಡಿಸದ ರಕ್ತ ಪಡೆಯುವುದರಿಂದ ಹರಡುತ್ತದೆ. ಆದ್ದರಿಂದ ಯುವಕರು ಹೆಚ್ಚು ಜಾಗ್ರತೆ ವಹಿಸಲು ಮಧುಸೂದನ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement