ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಾಗತೀಕರಣದಿಂದ ಆರ್ಥಿಕ ಪ್ರಗತಿಯಲ್ಲಿ ಕುಂಠಿತ

Vishwanath S
Updated On : 6 Feb 2014, 12:54 pm

ಹುಳಿಯಾರು: ಪ್ರಸ್ತುತ ದಿನಗಳಲ್ಲಿ ದೇಶದಾದ್ಯಂತ ಹೆಚ್ಚುತ್ತಿರುವ ಜಾಗತೀಕರಣದ ಪರಿಣಾಮದಿಂದಾಗಿ ದೇಶದ ಆರ್ಥಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ದೇಶದ ಪ್ರಗತಿಯನ್ನು ಕುಂಠಿತವಾಗುವಂತೆ ಮಾಡುತ್ತಿದೆ ಎಂದು ನಿವೃತ್ತ ಪ್ರೊ.ಬಿ.ಎಂ.ಕುಮಾರಸ್ವಾಮಿ ವಿಷಾದಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ವಿಶೇಷ  ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು.
ಜಾಗತೀಕರಣದಿಂದ  ದೇಶದ ಆರ್ಥಿಕ  ಪ್ರಗತಿ ಬಹಳ ಕೆಳಮಟ್ಟಕ್ಕಿಳಿಯುತ್ತಿದ್ದು, ಬಡತನ, ನಿರುದ್ಯೋಗ, ಅಸಮಾನತೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಹೆಚ್ಚಾಗಿ ಉದ್ಭವಿಸುತ್ತಿವೆ. ದೇಶದ ಪ್ರಗತಿಗೆ ತೊಡಕಾಗುತ್ತಿದೆ ಎಂದರು. ಪ್ರಪಂಚದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕದ ಕೈಗೊಂಬೆಯಂತಾಗಿರುವ ನಮ್ಮ ದೇಶ ಅಲ್ಲಿನ ಆರ್ಥಿಕತೆಗೆ ಒಗ್ಗಿಕೊಂಡಿದ್ದು ಅಲ್ಲಿ ಆರ್ಥಿಕ ಹಿಂಜರಿತ ಉಂಟಾದರೆ ನಮ್ಮ ದೇಶದಲ್ಲಿನ ಆರ್ಥಿಕತೆಯಲ್ಲಿ ಅಲ್ಲೋಲಕಲ್ಲೋಲ ವಾತಾವರಣ ಸೃಷ್ಟಿಯಾಗುತ್ತದೆ ಎಂದರು. ಜಾಗತೀಕರಣದಿಂದ ನಾವು ಗಳಿಸಿಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚಾಗಿದೆ. ತಂತ್ರಜ್ಞಾನದ ಅಭಿವೃದ್ಧಿಯ ಹೆಸರಿನಲ್ಲಿ ವಿವಿಧ ಆಧುನಿಕ ಉಪಕರಣಗಳು ಮನೆಮನೆಗೂ ತಲುಪಿ, ಜೀವನವನ್ನು ವೈಭವೀಕರಿಸಿರಬಹುದು. ಆದರೆ ಅದು ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಲಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement